LATEST NEWS
ಉಡುಪಿಯಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಉಡುಪಿಯಲ್ಲಿ ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ಉಡುಪಿ ಡಿಸೆಂಬರ್ 28: ಉಡುಪಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ವಿವಿಧ 17 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಉಡುಪಿಯಲ್ಲೂ ಮುಂಜಾನೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮಂಗಳೂರಿನ ಸರ್ಕಾರಿ ಶಿಕ್ಷಕ ತರಬೇತಿ ಕೇಂದ್ರದ ರೀಡರ್ ಮಂಜುನಾಥಯ್ಯ ಮನೆ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಎಸಿಬಿ ಪಶ್ಚಿಮ ವಲಯ ಎಸ್ಪಿ ಶೃತಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಉಡುಪಿಯ ಮಣಿಪಾಲದಲ್ಲಿ ಇರುವ ಮಂಜುನಾಥಯ್ಯ ಅವರ ಪ್ರಿಯದರ್ಶಿನಿ ಪ್ಲಾಟ್ ಗೆ ದಾಳಿ ನಡೆಸಿ ಕಡತ ಪರೀಶಿಲನೆ ನಡೆಸುತ್ತಿದ್ದಾರೆ.
ಸಾರ್ವಜನಿಕ ದೂರಿನ ಆಧಾರದಲ್ಲಿ ಈ ಎಸಿಬಿ ದಾಳಿ ನಡೆದಿದ್ದು. ಚಿಕ್ಕಮಗಳೂರಿನ ಬಿರೂರು ಹಾಗೂ ಶಿವಮೊಗ್ಗದ ಚೆನ್ನಗಿರಿಯಲ್ಲಿ ಇರುವ ಮಂಜುನಾಥಯ್ಯ ಅವರ ಸಂಬಂಧಿಕರ ಮನೆ ಮೇಲೂ ಎಸಿಬಿ ದಾಳಿ ನಡೆಸಿದೆ.
ಮಂಜುನಾಥಯ್ಯ ಉಡುಪಿ ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಉಡುಪಿ ನಗರ ಸಭೆಯ ಪೌರಾಯುಕ್ತರಾಗಿದ್ದ ಅವಧಿಯಲ್ಲಿ ಮಂಜುನಾಥಯ್ಯನ ಮೇಲೆ ಸಾಕಷ್ಟು ಭ್ರಷ್ಟಾಚಾರ ದ ಆರೋಪ ಕೇಳಿಬಂದಿತು. ಪೌರಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಂಜುನಾಥಯ್ಯ ಹಟಾವೊ ಉಡುಪಿ ಬಚಾವೊ ಅನ್ನೊ ಆಂದೋಲನ ವನ್ನು ಉಡುಪಿ ಬಿಜೆಪಿ ನಿರಂತರವಾಗಿ ನಡೆಸಿತ್ತು. ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಮಂಜುನಾಥಯ್ಯ ಮಂಗಳೂರಿಗೆ ಶಿಕ್ಷಣ ಕ್ಷೇತ್ರಕ್ಕೆ ರೀಡರ್ ಅಗಿ ನೇಮಕ ಮಾಡಲಾಗಿತ್ತು .ಸದ್ಯ ಸಾರ್ವಜನಿಕ ದೂರಿನ ಆಧಾರದಲ್ಲಿ ಎಸಿಬಿ ದಾಳಿ ನಡೆಸಿದ್ದು ತನಿಖೆ ಮುಂದುವರೆದಿದೆ.