LATEST NEWS
ನಟ ಸುಶಾಂತ್ ಕುರಿತು ನಕಲಿ ಟ್ವೀಟ್ ಪ್ರಸಾರ ‘ಆಜ್ ತಕ್’ಗೆ ಒಂದು ಲಕ್ಷ ರೂ. ದಂಡ
ಮುಂಬೈ, ಅಕ್ಟೋಬರ್ 8 : ನಟ ಸುಶಾಂತ್ ಸಿಂಗ್ ರಾಜಪುತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಟ್ವೀಟ್‍ಗಳನ್ನು ಕಾರ್ಯಕ್ರಮದ ವೇಳೆ ಪ್ರಸಾರ ಮಾಡಿದ ಸುದ್ದಿ ವಾಹಿನಿ ಆಜ್ ತಕ್‍ಗೆ ನ್ಯೂಸ್ ಬ್ರಾಡ್‍ಕಾಸ್ಟಿಂಗ್ ಸ್ಟಾಂಡಡ್ರ್ಸ್ ಅಥಾರಿಟಿ ರೂ 1 ಲಕ್ಷ ದಂಡ ವಿಧಿಸಿದೆಯಲ್ಲದೆ ತಾನು ಮಾಡಿದ ತಪ್ಪಿಗೆ ಕ್ಷಮಾಯಾಚನೆಯನ್ನೂ ಪ್ರಸಾರ ಮಾಡಬೇಕೆಂದು ಸೂಚಿಸಿದೆ.ಸುಶಾಂತ್ ಅವರದ್ದೆಂದು ಹೇಳಿಕೊಂಡು ‘ಆಜ್ ತಕ್’ ಕಾರ್ಯಕ್ರಮ ಪ್ರಸಾರದ ವೇಳೆ ಟ್ವೀಟ್‍ಗಳನ್ನು ತೋರಿಸುವ ಮುನ್ನ ವಾಹಿನಿಯು ಸೂಕ್ತ ಪರಾಮರ್ಶೆ ನಡೆಸಿಲ್ಲ ಎಂದು ತನ್ನ ಅಕ್ಟೋಬರ್ 6ರ ಆದೇಶದಲ್ಲಿ ಪ್ರಾಧಿಕಾರ ಹೇಳಿದೆ.
ಈ ನಿರ್ದಿಷ್ಟ ಕಾರ್ಯಕ್ರಮದ ವೀಡಿಯೋಗಳು ವೆಬ್ ಸೈಟ್‍ನಲ್ಲಿ ಯುಟ್ಯೂಬ್ ಮತ್ತಿತರ ಕಡೆಗಳಲ್ಲಿ ಅಪ್ಲೋಡ್ ಮಾಡಲಾಗಿದ್ದರೆ ಅದನ್ನು ತಕ್ಷಣ ತೆಗೆದು ಹಾಕಬೇಕೆಂದೂ ವಾಹಿನಿಗೆ ಸೂಚಿಸಲಾಗಿದೆ. ಕ್ಷಮಾಯಾಚನೆಯ ಪದಗಳು ಹೇಗಿರಬೇಕು ಯಾವ ದಿನ ಯಾವ ಸಮಯದಲ್ಲಿ ಈ ಕ್ಷಮಾಯಾಚನೆಯನ್ನು ಪ್ರಸಾರ ಮಾಡಬೇಕೆಂದು ಪ್ರಾಧಿಕಾರವೇ ನಿರ್ಣಯಿಸಲಿದ್ದು, ಸೂಚನೆಯನ್ನು ಪಾಲಿಸಿರುವ ಕುರಿತಂತೆ ಆಜ್ ತಕ್ ಸಿಡಿಯಲ್ಲಿ ಸೂಕ್ತ ಆಧಾರದೊಂದಿಗೆ ಪ್ರಸಾರವಾದ ಏಳು ದಿನಗಳೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ.
ಸುಶಾಂತ್ ಅವರ ಮೃತದೇಹದ ಚಿತ್ರಗಳನ್ನು ಪ್ರಸಾರ ಮಾಡಿ ನಿಯಮಾವಳಿಗಳನ್ನು ಉಲ್ಲಂಘಿಸಿದ ‘ಇಂಡಿಯಾ ಟಿವಿ’ ನ್ಯೂಸ್ ಕೂಡ ಕ್ಷಮೆಯಾಚಿಸಬೇಕು ಎಂದು ಪ್ರಾಧಿಕಾರ ಹೇಳಿದೆ. ‘ಝೀ ನ್ಯೂಸ್’ ಹಾಗೂ ‘ನ್ಯೂಸ್ 24’ಗೆ ಕೂಡ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಲು ಸೂಚಿಸಲಾಗಿದೆ. ಅತ್ತ ನ್ಯೂಸ್ ನೇಶನ್ ಹಾಗೂ ಎಬಿಪಿ ನ್ಯೂಸ್ ವಾಹಿನಿಗಳಿಗೆ ಎಚ್ಚರಿಕೆ ನೀಡಲಾಗಿದೆ