DAKSHINA KANNADA
ಪುತ್ತೂರು : ಸಿಡಿಲಾಘಾತಕ್ಕೆ ಯುವಕ ಬಲಿ…!
ಪುತ್ತೂರು : ದಕ್ಷಿಣ ಕನ್ನಡದಲ್ಲಿ ಫೆಂಗಾಲ್ ಚಂಡಮಾರುತ ಭಾರಿ ಪ್ರಭಾವದಿಂದ ಭಾರಿ ಗಾಳಿಮಳೆಯಾಗುತ್ತಿದ್ದುಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಅಕಾಲಿಕ ಸಿಡಿಲು ಮಳೆ ಪುತ್ತೂರಿನಲ್ಲಿ ಓರ್ವ ಯುವಕನನ್ನು ಬಲಿ ಪಡೆದಿದೆ.
ಪುತ್ತೂರಿನ ಕೆಯ್ಯೂರು ಸಮೀಪ ಈ ಘಟನೆ ಸಂಭವಿಸಿದ್ದು ಮೃತನನ್ನು 25 ವರ್ಷದ ನಾರಾಯಣ ಎಂದು ಗುರುತ್ತಿಸಲಾಗಿದೆ. ಪಕ್ಕದ ಮನೆಯ ಕೆಟ್ಟು ಹೋದ ವಿದ್ಯುತ್ ಬಲ್ಬ್ ನ್ನು ಬದಲಾಯಿಸಲು ಹೋದಾಗ ಸಿಡಿಲು ಬಡಿದು ನಾರಾಯಣ ಸಾವನ್ನಪ್ಪಿದ್ದಾರೆ. ಬಂಟ್ವಾಳದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮನೆ ಮಂದಿ ಅದೃಷ್ಟವಶಾತ್ ಪಾರಾಗಿದ್ದಾರೆ.
ಫೆಂಗಲ್ ಚಂಡಮಾರುತ ಪರಿಣಾಮದಿಂದಾಗಿ ಮಂಗಳವಾರ ಮಂಗಳೂರಿನಲ್ಲಿ ನಡೆಯಬೇಕಿದ್ದ ಬಹುಸಂಸ್ಕೃತಿ ಉತ್ಸವವನ್ನು ಮುಂದೂಡಲಾಗಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಸಚಿವ ಶಿವರಾಜ್ ತಂಗಡಗಿ ಪ್ರವಾಸ ರದ್ದಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲಾಡಳಿತ ಸೇರಿದಂತೆ ವಿವಿಧ ಅಕಾಡೆಮಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಫೆಂಗಲ್ ಚಂಡಮಾರುತದಿಂದ ಮಳೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.