Connect with us

    LATEST NEWS

    ಬಿಕಿನಿ ರೀತಿ ಡ್ರೆಸ್ ಧರಿಸಿ ಯುವಕರ ಬಳಿ ಅಭಿಪ್ರಾಯ ಕೇಳಿದ ಕೊಲ್ಕತ್ತಾ ಮಾಡೆಲ್

    ಕೊಲ್ಕತ್ತಾ ನವೆಂಬರ್ 18: ಸಾಮಾಜಿಕ ಜಾಲತಾಣದಲ್ಲಿ ತಾವು ವೈರಲ್ ಆಗಬೇಕೆಂದು ಜನ ಏನನ್ನೇಲ್ಲಾ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಾಡೆಲ್ ಬಿಕಿನಿ ರೀತಿಯ ಡ್ರೆಸ್ ಹಾಕಿಕೊಂಡು ಯುವಕರ ಬಳಿ ಹೋಗಿ ನಾನು ಈ ರೀತಿ ಡ್ರೆಸ್ ಹಾಕಿದರೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾಳೆ. ಸದ್ಯ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಕೋಲ್ಕತ್ತಾ ಮೂಲದ ಮಾಡೆಲ್ ಹೇಮೋಶ್ರೀ ಭದ್ರ ತಮ್ಮ ಡ್ರೆಸ್ ಮೂಲಕ ವಿವಾದ ಮಾಡಿಕೊಳ್ಳುತ್ತಾ ಇರುತ್ತಾರೆ. ಈ ಹಿಂದೆ ನವರಾತ್ರಿ ಸಂದರ್ಭ ದುರ್ಗಾ ದೇವಿ ಎದುರು ಸ್ವಲ್ಪ ಜಾಸ್ತಿ ಎಕ್ಸ್ ಪೋಸ್ ಇರುವ ಸೀರೆ ಉಟ್ಟು ವಿವಾದ ಮಾಡಿದ್ದರು. ಇದೀಗ ಬಿಕಿನಿಯಂತಹ ಡ್ರೆಸ್ ಧರಿಸಿ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುತ್ತಾ ಜನರ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ.

    ಈ ವಿಡಿಯೋ ಜಲ್ಲಿ ಅವರು ಯುವಕರ ಬಳಿ ಹೋಗಿ ನಾನು ಧರಿಸಿರುವ ಬಟ್ಟೆ ನೋಡಲು ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನೆ ಕೇಳಿದ್ದಾಳೆ. ಈಕೆಯ ಅವತಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
    ಹೆಚ್ಚು ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಮಾಡೆಲ್ ಚಹಾ ಮಾರಾಟಗಾರರ ಬಳಿಗೆ ಹೋಗುತ್ತಿರುವುದು ಕಂಡುಬರುತ್ತದೆ. ಅಂಗಡಿ ತಲುಪಿ ಟೀ ಆರ್ಡರ್ ಮಾಡಿದಳು. ನಂತರ ಅವಳು ಚಹಾ ಮಾರುವವನನ್ನು ಕೇಳುತ್ತಾಳೆ, ಸಹೋದರ, ಅಂತಹ ಬಟ್ಟೆಯಲ್ಲಿ ಹುಡುಗಿಯನ್ನು ನೋಡಲು ನಿಮಗೆ ಏನಾದರೂ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದ್ದಾಳೆ.

    ನವೆಂಬರ್‌ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 9.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾಚಿಕೆಗೇಡಿನ ವರ್ತನೆ ಈಕೆಯದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾರ್ವಜನಿಕ ಸ್ಥಳದಲ್ಲಿ ಹೀಗೆ ಲಜ್ಜೆಗೆಟ್ಟು ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದಾರೆ.

     

     

    Share Information
    Advertisement
    Click to comment

    Leave a Reply

    Your email address will not be published. Required fields are marked *