LATEST NEWS
ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ…!
ಬ್ರಹ್ಮಾವರ, ಎಪ್ರಿಲ್ 19: ಬ್ರಹ್ಮಾವರದ ಸಭಾಭವನದಲ್ಲಿ ರವಿವಾರ ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲ ಎಂದ ಕಾರಣ ಮದುವೆಯೊಂದು ಮುರಿದು ಬಿದ್ದಿದೆ.
ಮೂಲತಃ ಬ್ರಹ್ಮಾವರದವರಾಗಿದ್ದು, ವರ ವಿದೇಶದಲ್ಲಿ, ವಧು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಸುಮಾರು 4 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಇಬ್ಬರೂ ದೂರವಾಣಿ ಸಂಪರ್ಕದಲ್ಲಿದ್ದರು. ಮದುವೆ ಕ್ರಮಗಳೆಲ್ಲ ಮುಂದುವರಿದು ತಾಳಿ ಕಟ್ಟುವ ಸಂದರ್ಭ ಬಂದಾಗ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್ ಇಷ್ಟಪಟ್ಟಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.
ಸುಮಾರು 1,000 ಮಂದಿಗೆ ಊಟೋಪಾಚಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಲನಚಿತ್ರಗಳಲ್ಲಿ ಬರುತ್ತಿದ್ದ ಘಟನೆ ನೈಜವಾಗಿ ನೋಡಿದ ಆಮಂತ್ರಿತರು ಆಶ್ಚರ್ಯಪಟ್ಟಿದ್ದಾರೆ. ಕೊನೆಗೆ ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಖರ್ಚಿನ ಸಮಪಾಲು ಹಾಕಲು ಒಪ್ಪುವುದರೊಂದಿಗೆ ಪ್ರಕರಣ ಮುಕ್ತಾಯಗೊಂಡಿತು.