LATEST NEWS
ಕಾರ್ಕಳ – ಬೋಳ ಗ್ರಾಮಪಂಚಾಯತ್ ವ್ಯಾಪ್ತಿಯ ರಸ್ತೆಗೆ ನಾಥೂರಾಮ್ ಗೋಡ್ಸೆ ನಾಮಕರಣ…..!!

ಉಡುಪಿ ಜೂನ್ 06 : ರಾಜ್ಯಸರಕಾರದ ಸಚಿವರೊಬ್ಬರ ತವರು ಜಿಲ್ಲೆಯಲ್ಲಿ ರಸ್ತೆಯೊಂದಕ್ಕೆ ನಾಥೂರಾಮ್ ಗೊಡ್ಸೆ ಎಂದು ನಾಮಕರಣ ಮಾಡಿರುವ ಘಟನೆ ನಡೆದಿದ್ದು, ಇದೀಗ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಸ್ತೆ ಹಾಕಲಾಗಿದ್ದ ಬೋರ್ಡ್ ನ್ನು ತೆಗೆದು ಹಾಕಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯೊಂದಕ್ಕೆ ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ ಎಂದು ನಾಮಫಲಕ ಹಾಕಲಾಗಿದ್ದು , ಇದರ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಸುದ್ದಿ ವೈರಲ್ ಆದ ಬೆನ್ನಲ್ಲೆ ಕಾಂಗ್ರೇಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು,

ಕೂಡಲೇ ಎಚ್ಚೆತ್ತ ಕಾರ್ಕಳ ಪೊಲೀಸರು, ಬೋಳ ಗ್ರಾಮ ಪಂಚಾಯತ್ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿ ವಿವಾದಾಸ್ಪದ ಬೋರ್ಡ್ ತೆರವುಗೊಳಿಸಿದ್ದಾರೆ.
ಪಂಚಾಯತ್ ಗೂ ಈ ಬೋರ್ಡ್ ಗೂ ಸಂಬಂಧವಿಲ್ಲ ಇದು ಯಾರೋ ಕಿಡಿಗೇಡಿಗಳು ಹಾಕಿದ ನಾಮಫಲಕ. ಪಂಚಾಯತ್ ನಲ್ಲಿ ಈ ಹೆಸರಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ ಎಂದು ಪಿಡಿಓ ಸ್ಪಷ್ಟನೆ ನೀಡಿದ್ದಾರೆ.