LATEST NEWS
ಮಂಗಳೂರು ರಥ ಬೀದಿಯಲ್ಲಿ ಮುರಿದು ಬಿದ್ದ ಸ್ಮಾರ್ಟ್ ಸಿಟಿ ಬೀದಿ ದೀಪ ಕಂಬ, ತಪ್ಪಿದ ಅನಾಹುತ..!
ಮಂಗಳೂರು : ಮಂಗಳೂರು ನಗರದ ಕಾರ್ ಸ್ಟ್ರೀಟ್ ಮುಖ್ಯ ರಸ್ತೆಯಲ್ಲಿ ಬೀದಿ ದೀಪದ ಕಂಬ ಬುಧವಾರ ಏಕಾಏಕಿ ಮುರಿದು ಬಿದ್ದಿದೆ. ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿದ್ದ ಈ ಕಂಬ ಬುಧವಾರ ಮಧ್ಯಾಹ್ನ ಮುರಿದು ಬಿದ್ದಿದೆ.
ಕಂದ ಫುಟ್ ಪಾತ್ ನ ಇನ್ನೊಂದು ಮಗ್ಗುಲಿಗೆ ತುಂಡಾಗಿ ಬಿದ್ದಿದೆ. ರಸ್ತೆ ಬಿದ್ದಿದ್ದರೆ ವಾಹನಗಳು ಜಖಂ ಗೊಳ್ಳುವುದರ ಜೊತೆಗೆ ಜೀವಹಾನಿ ಯಾಗುವ ಅಪಾಯವಿತ್ತು ಎಂದು ಶಗತಳಿಯರು ಮಾಹಿತಿ ನೀಡಿದ್ದಾರೆ. ಮಂಗಳೂರು ನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆಯಡಿ ಇಲ್ಲಿನ ಮುಖ್ಯ ರಸ್ತೆಯನ್ನು ಅಗಲಗೊಳಿಸಿ ಬೃಹತ್ ಅಲಂಕಾರಿಕಾ ಕಂಬಗಳನ್ನು ಬೀದಿ ದೀಪಗಳಿಗೆ ಅಳವಡಿಸಲಾಗಿತ್ತು. ಆದ್ರೆ ಇದೀಗ ಕಂಬ ಮುರಿದು ಬಿದ್ದಿದ್ದರಿಂದ ಉಳಿದ ಕಂಬಗಳ ಸ್ಥಿರತೆ, ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ. ನೂರಾರು ಕೋಟಿ ರೂಪಾಯಿಗಳ ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಕಾಮಗಾರಿಗಳು ಮಂಗಳೂರಿನ ಅಲ್ಲಲ್ಲಿ ನಡೆಯುತ್ತಿದ್ದು ಬಹುತೇಕ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಜನರ ತೆರಿಗೆ ಹಣ ವೃತ ಪೋಲಾಗುತ್ತಿದೆ ಎಂದ ಆರೋಪಗಳು ಕೇಳಿ ಬರುತ್ತಿವೆ.