Connect with us

    KARNATAKA

    ಸಾಲದ ಹೊರೆ ತಾಳಲಾರದೆ ಕಟ್ಟಡದ ಮೇಲಿಂದ ಹಾರಿ ಹಿರಿಯ ಪತ್ರಕರ್ತ ಆತ್ಮಹತ್ಯೆ..!!

    ಹಿರಿಯ ಪತ್ರಕರ್ತ ಕೆ.ಎನ್‌.ರೆಡ್ಡಿ (57) ಅವರು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಕಲಬುರಗಿ: ಹಿರಿಯ ಪತ್ರಕರ್ತ ಕೆ.ಎನ್‌.ರೆಡ್ಡಿ (57) ಅವರು ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ರಾಯಚೂರಿನ ಕಲ್ಲೂರು ಗ್ರಾಮದವರಾದ ರೆಡ್ಡಿ ಅವರು, ಹಲವು ವರ್ಷಗಳಿಂದ ಕಲಬುರಗಿ ನಗರದ ದರಿಯಾಪುರದಲ್ಲಿ ಪತ್ನಿ ಹಾಗೂ ಪುತ್ರಿ ಜೊತೆ ವಾಸವಾಗಿದ್ದರು. ಸಾಲದ ಹೊರೆ ಮತ್ತು ಕೌಟುಂಬಿಕ ಕಲಹಕ್ಕೆ ಬೇಸತ್ತು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ರೆಡ್ಡಿ ಅವರು ‘ಡೆಕ್ಕನ್ ಹೆರಾಲ್ಡ್‌’ ಸೇರಿದಂತೆ ಹಲವು ಇಂಗ್ಲಿಷ್ ಪತ್ರಿಕೆಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದರು.

    ಜೆಸ್ಕಾಂನ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಆಗಿದ್ದರು. ಜೆ.ಎಚ್‌.ಪಟೇಲರ ಕುರಿತು ಪುಸ್ತಕಗಳನ್ನು ಬರೆದಿದ್ದರು. ಪೊಲೀಸ್‌ ಕಮಿಷನರ್‌ ಕಲಬುರಗಿ ಚೇತನ್‌ ಆರ್‌. ಮಾತನಾಡಿ ರೆಡ್ಡಿ ಅವರ ಆತ್ಮಹತ್ಯೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದರು.

    ಪತ್ರಿಕೋದ್ಯಮದಿಂದ ದೂರ ಸರಿದು ಏಳು ವರ್ಷಗಳ ಹಿಂದೆ ರಾಯಚೂರಿನಲ್ಲಿ ಶಾಲೆಯೊಂದನ್ನು ಆರಂಭಿಸಿದ್ದರು. ಆದರೆ, ಕೋವಿಡ್‌ ಬಳಿಕ ಸರಿಯಾಗಿ ನಡೆಯಲಿಲ್ಲ. ಸಾಲದ ಹೊರೆ ಹೆಚ್ಚಾಗಿ, ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ 3ರ ಸುಮಾರಿಗೆ ಬೇಸರದಿಂದಲೇ ಮನೆಯಿಂದ ಹೊರಹೋಗಿದ್ದ ರೆಡ್ಡಿ ಅವರು ರಾತ್ರಿಯಾದರೂ ವಾಪಸ್‌ ಆಗಲಿಲ್ಲ. ಕುಟುಂಬಸ್ಥರು ಆತಂಕದಿಂದ ರಾತ್ರಿ 10ರ ಸುಮಾರಿಗೆ ಪೊಲೀಸ್ ಠಾಣೆಗೆ ಬಂದು ಕಾಣೆಯಾಗಿರುವ ಬಗ್ಗೆ ತಿಳಿಸಿದ್ದರು.

    ಮನೆಯ ಸಮೀಪದಲ್ಲಿ ಬೈಕ್‌ ನಿಲ್ಲಿಸಿದ್ದನ್ನು ಸಂಬಂಧಿಯೊಬ್ಬರು ಗಮನಿಸಿ ಸುತ್ತಲೂ ಹುಡುಕಾಡಿದಾಗ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

    Share Information
    Advertisement
    Click to comment

    Leave a Reply

    Your email address will not be published. Required fields are marked *