KARNATAKA
ಕೋಲಾರದಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ..!
ಕೋಲಾರ : ಅನೇಕ ದಂತ ಕತೆಗಳು, ಈ ಬಿಳಿ ನಾಗರಹಾವು ಕಾಣ ಸಿಕ್ಕರೆ ಅದೃಷ್ಟ ಖುಲಾಯಿಸುತ್ತೆ ಹೀಗೇ ಅನೇಕ ವಿಭಿನ್ನ ಕಥೆಗಳಿರುವ ಅಪರೂಪದಲ್ಲಿ ಅಪರೂಪದ ಶ್ವೇತ ಬಣದ ನಾಗರಹಾವೊಂದು ಕೋಲಾರದಲ್ಲಿ ಪತ್ತೆಯಾಗಿದೆ.
ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು. ಅಪರೂಪದ ಬಿಳಿನಾಗರ ಹಾವನ್ನು ನೋಡಲು ಮನೆಗೆ ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರುಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.
ಅಲ್ಬಿನೋ ಕೋಬ್ರಾ ಎಂದೆ ಕರೆಯಲ್ಪಡುವ ಈ ಬಿಳಿ ಬಣ್ಣದ ನಾಗರಹಾವು ಚರ್ಮ ಹಾಗೂ ರಕ್ತದ ಸಮಸ್ಯೆಯಿಂದ ಈ ರೀತಿ ಆಗುತ್ತೆ. ಡಾಳವಾಗಿ ಕಾಣುವ ಈ ಬಣ್ಣದಿಂದ ಸುಲಭವಾಗಿ ಬೇಟೆ ಪ್ರಾಣಿಗಳಿಗೆ ಆಹಾರವಾಗುತ್ತೆ.