Connect with us

    KARNATAKA

    ಅಧಿಕಾರಿಗಳ ಕಿರುಕುಳ ಆರೋಪ ಮಡಿಕೇರಿಯಲ್ಲಿ ವಿಷ ಕುಡಿದು KSRTC ನೌಕರ ಆತ್ಮಹತ್ಯೆಗೆ ಯತ್ನ..!

    ಮಡಿಕೇರಿ : ಮಡಿಕೇರಿಯ ಕೆಎಸ್ಸಾರ್ಟಿಸಿ ಡಿಪೋದ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ .

    ಇತ್ತೀಚೆಗೆ ಸಾರಿಗೆ ನೌಕರರು ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

    ಅದರಂತೆ ಇದೀಗ ವಿಷ ಕುಡಿದು KSRTC ನೌಕರ ಅಭಿಷೇಕ್ ಎಂಬಾತ​ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ (Madikeri) ಕೆಎಸ್​ಆರ್​ಟಿಸಿ  ಡಿಪೋದಲ್ಲಿ‌ ನಡೆದಿದೆ.

    ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಡಿಪೋದಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಬ್ಬಾಲೆ ಗ್ರಾಮದ ನಿವಾಸಿ ಅಭಿಷೇಕ್ ವಿಷ ಸೇವಿಸಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಧಿಕಾರಿಯ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply