Connect with us

    LATEST NEWS

    ಸಿಎಂ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ ಬಳಿ ಬೆಂಕಿ..!

    ಬೈಂದೂರು, ಎಪ್ರಿಲ್ 13 : ಕರಾವಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೆಂಪಲ್ ರನ್ ಕಾರ್ಯಕ್ರಮದಲ್ಲಿದ್ದು ವಿವಿಧ ದೇವಾಲಯಗಳನ್ನು ಸಂದರ್ಶಿಸುತ್ತಿದ್ದಾರೆ.

    ಕೊಲ್ಲೂರು ಭೇಟಿ ಸಂದರ್ಭ  ಸಿಎಂ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಇಂದು ಗುರುವಾರ ಉಡುಪಿ ಜಿಲ್ಲೆಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್​ ಬಳಿ ಈ ಘಟನೆ ಸಂಭವಿಸಿದೆ.

    ಬೊಮ್ಮಾಯಿ ಅರೆಶಿರೂರು ಹೆಲಿಪ್ಯಾಡ್‌ ಮೂಲಕ ಕೊಲ್ಲೂರಿಗೆ ಆಗಮಿಸಿದ ವೇಳೆ ಈ ಘಟನೆ ಸಂಭವಿಸಿದೆ. ಬೆಂಕಿ ತಗುಲುವ ಮುನ್ನವೇ ಸಿಎಂ ಬೆಂಗಾವಲು ಪಡೆ ಅಲ್ಲಿಂದ ತೆರಳಿದ್ದಾರೆ. ಹೆಲಿಕಾಫ್ಟರ್‌ ಪ್ಯಾನ್‌ ಗಾಳಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅವಘಡವನ್ನು ತಪ್ಪಿಸಿದ್ದಾರೆ.

    ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ದಂಪತಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.  ದೇವಸ್ಥಾನದಲ್ಲಿ ನಟ ರಿಷಬ್ ಶೆಟ್ಟಿ ಸಹ ಉಪಸ್ಥಿತರಿದ್ದರು. ಸಿಎಂ ಕುಟುಂಬದ ಜೊತೆಯೇ ಕಾಂತಾರ ಸ್ಟಾರ್ ದೇವರ ದರ್ಶನ ಪಡೆದರು.

    ಕೊಲ್ಲೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಅವರು ಸಿಕ್ಕಿದ್ದು ಆಕಸ್ಮಿಕ​. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ಅವರು ದೇವಸ್ಥಾನದಲ್ಲಿದ್ದರು. ಬಳಿಕ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಯಾವುದು ಕೂಡ ಪೂರ್ವ ನಿರ್ಧರಿತ ಅಲ್ಲ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ.

    ಈ ಹಿಂದೆ ಕೂಡ ರಿಷಬ್ ಅವರು ನಮ್ಮ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ಅವರ ವಿಚಾರಗಳು ಹಾಗೆ ಇವೆ. ಅದನ್ನು ಆಗಾಗ್ಗೆ ತೋರಿಸಿದ್ದಾರೆ ಎಂದರು. ನಟ ರಿಷಬ್ ಶೆಟ್ಟಿ ಅವರು ಕೊಲ್ಲೂರು ಮೂಕಾಂಬಿಕಾ ದೇಗುಲದ ಒಳಗೆ ಇದ್ದದ್ದು ನೋಡಿ ನನಗೆ ಆಶ್ಚರ್ಯ ಆಯ್ತು.

    ಬಿಜೆಪಿ ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದರು. ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನು ಆಶೀರ್ವಾದ ಕೊಡುತ್ತಾಳೆ ಅನ್ನೋದನ್ನು ನೋಡೋಣ ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply