Connect with us

  LATEST NEWS

  ನಮೀಬಿಯಾದಿಂದ ತರಲಾಗಿದ್ದ ಹೆಣ್ಣು ಚೀತಾ ಸಾವು…!!

  ಬೋಪಾಲ್ ಮಾರ್ಚ್ 27: ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ 8 ಚೀತಾಗಳ ಪೈಕಿ ಒಂದು ಚೀತಾ ಅನಾರೋಗ್ಯದಿಂದ ಸಾವನಪ್ಪಿದೆ.


  ‘ಸಾಷಾ’ ಹೆಸರಿನ ಹೆಣ್ಣು ಚೀತಾ ಇಂದು ಮೃತಪಟ್ಟಿದೆ. ಮೂರು ವರ್ಷದ ಈ ಚೀತಾ, ಭಾರತಕ್ಕೆ ತರುವ ಮೊದಲೇ ಕಿಡ್ನಿ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿತ್ತು. ಸಾಷಾ ಜನವರಿ 23ರಂದು ಬಳಲಿಕೆ ಮತ್ತು ನಿಶ್ಶಕ್ತಿಯಿಂದ ಬಳಲಿತ್ತು. ಬಳಿಕ ಅದನ್ನು ಕ್ವಾರಂಟೈನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.

  ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply