Connect with us

    LATEST NEWS

    ಕಾಸರಗೋಡಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿದ್ದ ನಕಲಿ ಡಾಕ್ಟರ್ ಪೊಲೀಸ್ ಬಲೆಗೆ

    ಕಾಸರಗೋಡು: ಕಾಸರಗೋಡಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿದ್ದ ನಕಲಿ ಡಾಕ್ಟರ್ ಪೊಲೀಸ್ ಬಲೆಗೆ  ಬಿದ್ದಿದ್ದಾನೆ.
    ಈ ನಕಲಿ  ವೈದ್ಯನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಲಕ್ಕಾಡ್ ಮಣ್ಣಾರ್ ಕ್ಕಾಡ್ ನ ಸಿ.ಎಂ.ಜಮಾಲುದ್ದೀನ್ (56) ಎಂದು ಗುರುತಿಸಲಾಗಿದೆ.
    ಉಪ್ಪಳ ಪಚ್ಲಂಪಾರೆಯಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.ಪಚ್ಲಂಪರೆಯಲ್ಲಿ ಕ್ಲಬ್ ವತಿಯಿಂದ ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ಈತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಿದ್ದನು. ಇದರಿಂದ ಸಂಶಯಗೊಂಡ ಶಿಬಿರಾರ್ಥಿಗಳು ಪೊಲೀಸ್ ದೂರು ನೀಡಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
    ಈತ ಹಲವೆಡೆ ವೈದ್ಯಕೀಯ ಶಿಬಿರ ಆಯೋಜಿಸಿ ಚಿಕಿತ್ಸೆ ನೀಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
    Share Information
    Advertisement
    Click to comment

    You must be logged in to post a comment Login

    Leave a Reply