Connect with us

    MANGALORE

    ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ :ಅರೈಸ್ ಅವೇಕ್ ಪಾರ್ಕ್ ಉದ್ಘಾಟನೆ

    ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ :ಅರೈಸ್ ಅವೇಕ್ ಪಾರ್ಕ್ ಉದ್ಘಾಟನೆ

    ಮಂಗಳೂರು, ಮಾರ್ಚ್27 : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ ಪ್ರಸಕ್ತ ವರ್ಷ 20 ವಾರಗಳನ್ನು ಪೂರೈಸಿ ನಾಲ್ಕನೇ ಹಂತದ ಅರ್ಧ ದಾರಿ ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಕರಂಗಲಪಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಈ ಸಂದರ್ಭದಲ್ಲಿ ಪ್ರಥಮವಾಗಿ “ಅರೈಸ್ ಅವೇಕ್” ಎಂಬ ಹೆಸರಿನ ನವೀಕೃತ ಪಾರ್ಕ್‍ವೊಂದನ್ನು ಲೋಕಾರ್ಪಣೆ ಮಾಡಲಾಯಿತು. ಬೆಳಿಗ್ಗೆ 7:30 ಕ್ಕೆ ಸರಿಯಾಗಿ ವೇದಘೋಷದ ಮಂತ್ರಗಳೊಂದಿಗೆ ಸ್ವಾಮಿ ಜಿತಕಾಮಾನಂದಯವರ ಉಪಸ್ಥಿತಿಯಲ್ಲಿ ಪಾರ್ಕನ್ನು ಶಾಸಕ ಶ್ರೀ ಜೆ ಆರ್ ಲೋಬೊ ಉದ್ಘಾಟಿಸಿದರು.

    ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ ಕಾರ್ಣಿಕ್, ಮನಪಾ ಸದಸ್ಯರಾದ ಪ್ರಕಾಶ ಸಾಲ್ಯಾನ್, ಎಂ.ಆರ್.ಪಿ.ಎಲ್ ಸಂಸ್ಥೆಯ ಪ್ರಶಾಂತ ಬಾಳಿಗಾ, ಶ್ರೀ ಉಮಾನಾಥ್ ಕೋಟೆಕಾರ್ ಮತ್ತಿತರರು ಈ ಶುಭಸಂದರ್ಭದಲ್ಲಿ ಉಪಸ್ಥಿತರಿದ್ದರು.
    ಶ್ರೀ ಜೆ ಆರ್ ಲೋಬೊ ಮಾತನಾಡಿ “ಮನಸ್ಸುಗಳು ಸ್ವಚ್ಛವಾದರೆ ನಮ್ಮ ಪರಿಸರ ಸ್ವಚ್ಛವಾಗುತ್ತದೆ ಎನ್ನುವುದಕ್ಕೆ ಈ ಪಾರ್ಕಿನ ನಿರ್ಮಾಣವೇ ಸಾಕ್ಷಿಯಾಗಿದೆ.

    ರಾಮಕೃಷ್ಣ ಮಿಷನ್ನಿನ ಸ್ವಚ್ಛತಾ ಆಂದೋಲನದಿಂದ ಜನರಲ್ಲಿ ಜಾಗೃತಿ ಮೂಡಿರುವುದು ಅತ್ಯಂತ ಸ್ಪಷ್ಟ. ಆದ್ದರಿಂದ ಅಭಿಯಾನದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನು ಅಭಿನಂದಿಸುತ್ತೇನೆ””ಎಂದು ತಿಳಿಸಿದರು.
    ಸ್ವಾಮಿ ಜಿತಕಾಮಾನಂದಜಿ ತಮ್ಮ ಆಶೀರ್ವಚನದಲ್ಲಿ “ನಮ್ಮ ನಗರವನ್ನು ಕಸಮುಕ್ತವನ್ನಾಗಿ ಸುಂದರವಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಪ್ರತಿಯೊಬ್ಬರೂ ನಾವು ಎಲ್ಲೆಂದರಲ್ಲಿ ಕಸ ಹಾಕುವುದಿಲ್ಲ ಎಂಬ ಪ್ರತಿಜ್ಞೆಮಾಡಬೇಕಿದೆ. ಜೊತೆಗೆ ನಗರದಲ್ಲಿ ಅಲ್ಲಲ್ಲಿ ನಿರುಪಯುಕ್ತ ಹಾಗೂ ತ್ಯಾಜ್ಯದಿಂದ ತುಂಬಿದ ಸ್ಥಳಗಳನ್ನು ಇಂತಹ ಉದ್ಯಾನಗಳಾಗಿ ರೂಪಿಸಿದರೆ ನಮ್ಮ ಮಂಗಳೂರು ಸ್ವಚ್ಛ ಹಾಗೂ ಸುಂದರವಾಗುತ್ತದೆ.” ಎಂದು ತಿಳಿಸಿದರು.

    ಮಹಾಪೌರರಾದ ಶ್ರೀ ಭಾಸ್ಕರ್ ಮೊಯ್ಲಿ ಮಾತನಾಡಿ “ಸ್ವಚ್ಛತೆಯ ವಿಷಯದಲ್ಲಿ ರಾಮಕೃಷ್ಣ ಮಿಷನ್ನಿನ ಪಾತ್ರ ಬಲು ದೊಡ್ಡದು. ನಗರಪಾಲಿಕೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲಿದೆ.

    ತನ್ಮೂಲಕ ಸ್ವಚ್ಛ ಮಂಗಳೂರು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು” ಎಂದರು.

    ಶ್ರಮದಾನ: ಉದ್ಯಾನವನದ ಉದ್ಘಾಟನೆಯ ಬಳಿಕೆ 21ನೇ ಭಾನುವಾರದ ಶ್ರಮದಾನಕ್ಕೆ ಸನ್ಮಾನ್ಯ ಮಹಾಪೌರರಾದ ಶ್ರೀ ಭಾಸ್ಕರ ಮೊಯ್ಲಿ ಹಾಗೂ ಮಾಜಿ ಉಪಮೇಯರ್ ರಜನೀಶ್ ಕಾಪಿಕಾಡ್ ಜಂಟಿಯಾಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

    ತದನಂತರ ಸ್ವಾಮಿಜಿಗಳು, ಶಾಸಕರು, ಮಹಾಪೌರರು ಸೇರಿದಂತೆ ಗಣ್ಯರು ಪೆÇರಕೆ ಹಿಡಿದು ರಸ್ತೆ ಬದಿಗಳನ್ನು ಶುಚಿಗೊಳಿಸಿದರು. ಹಿರಿಯ ಕಾರ್ಯಕರ್ತರಾದ ವಿಠಲದಾಸ ಪ್ರಭು, ಮುಖೇಶ ಆಳ್ವï sಸೌರಜ್ ಮಂಗಳೂರು ಹಾಗೂ ಮಹಮ್ಮದ್ ಶಮೀಮ್ ನೇತೃತ್ವದಲ್ಲಿ ಕಾರ್ಯಕರ್ತರು ನಾಲ್ಕು ರಸ್ತೆಗಳಲ್ಲಿ ಸ್ವಚ್ಛತಾ ಕೈಂಕರ್ಯ ನಡೆಸಿದರು. ಪಾರ್ಕಿನಿಂದ ಸುಬ್ರಮಣ್ಯ ಸದನದತ್ತ ಸಾಗುವ ಮಾರ್ಗವನ್ನು ಸ್ವಚ್ಛ ಮಂಗಳೂರು ಕಾರ್ಯಕರ್ತರು ಮಂಗಳೂರು ಹಿರಿಯ ನಾಗರಿಕರೊಂದಿಗೆ ಸೇರಿ ಗುಡಿಸಿದರು

    ಹಾಗೂ ಆವರಣ ಗೋಡೆಯ ಮೇಲೆ ಬೆಳೆದಿದ್ದ ಹುಲ್ಲು ತೆಗೆದರು. ಕರಂಗಲಪಾಡಿ ಜೈಲ್ ರಸ್ತೆಯಲ್ಲಿ ನಿಟ್ಟೆ ಫಿಸಿಯೋಥೆರಫಿ ಕಾಲೇಜಿನ ವಿದ್ಯಾರ್ಥಿಗಳು ಡಾ.ಧನೇಶ್ ಕುಮಾರ್ ಜೊತೆಗೂಡಿ ಸ್ವಚ್ಛತೆ ಮಾಡಿದರು. ಪಶು ಸಂಗೋಪನಾ ಕಾರ್ಯಾಲಯದ ಸುತ್ತಮುತ್ತ ಪವನ ಅಪಾರ್ಟಮೆಂಟ್ ಕರಂಗಲಪಾಡಿ ಸ್ಥಳೀಯ ನಿವಾಸಿಗಳು ಶುಚಿಮಾಡಿದರು.

    ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮನೆಮನೆಗೆ ತೆರಳಿ ಸ್ವಚ್ಛತಾ ಕರಪತ್ರ ಹಂಚಿ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದರು.
    ಕಟ್ಟಡತ್ಯಾಜ್ಯ ತೆರವು. ಪಶು ಸಂಗೋಪಣಾ ಇಲಾಖೆ ಕಚೇರಿ ಆವರಣ ಗೋಡೆಯ ಬಳಿಯಲ್ಲಿ ಅನೇಕ ದಿನಗಳಿಂದ ರಾಶಿ ರಾಶಿಯಾಗಿ ಬಿದ್ದ ಕಟ್ಟಡ ತ್ಯಾಜ್ಯವನ್ನು ಸಂದೀಪ ಕೋಡಿಕಲ್, ಜಗನ ಕೋಡಿಕಲ್, ಶಿವು ಪುತ್ತೂರು ಮತ್ತಿತರ ಕಾರ್ಯಕರ್ತರು ತೆರವುಗೊಳಿಸಿ, ಶುಚಿಗೊಳಿಸಿದರು.

    ಜಪಾನಿ ಪ್ರಜೆಗಳು ಮಸಾಹಿರೊ ಹಾಗೂ ಮಸಾಕೊ ಅಕೊಯಿ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಸಹೆಕ್ಕಿದರು. ಪ್ರಭಾಕರ ಶೆಟ್ಟಿ, ರಮೇಶ ರಾವ್, ದೇವಿಪ್ರಸಾದ ಕದ್ರಿ, ಸುಭೋದಯ ಆಳ್ವ, ಅಶೋಕ ಸುಬ್ಬಯ್ಯ, ಎಚ್‍ಎಮ್‍ಎಸ್ ಅಧ್ಯಕ್ಷರಾದ ಸುರೇಶ ಶೆಟ್ಟಿ, ಶ್ರೀಕಾಂತ ರಾವ್ ಸೇರಿದಂತೆ ನಾನ್ನೂರು ಕಾರ್ಯಕರ್ತರು ಕಾರ್ಯಕಮದಲ್ಲಿ ಭಾಗವಹಿಸಿದರು. ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜP ದಿಲರಾಜ್ ಆಳ್ವ ಅಭಿಯಾನವನ್ನು ಸಂಯೋಜಿಸಿದರು. ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಎಂಆರ್‍ಪಿಎಲ್ ಸಂಸ್ಥೆ ಪ್ರಾಯೋಜಕತ್ವ ನೀಡುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply