LATEST NEWS
ಮುಂಬೈ – ಇಂಡಿಗೋ ವಿಮಾನದಲ್ಲಿ ಬೀಡಿ ಸೇದಿ ಅರೆಸ್ಟ್ ಆದ ಪ್ರಯಾಣಿಕ
ಮುಂಬೈ ಮಾರ್ಚ್ 05 : ಪ್ರಯಾಣಿಕನೊಬ್ಬ ವಿಮಾನದ ಪ್ರಯಾಣದ ವೇಳೆ ಬೀಡಿ ಸೇದಿದ ಘಟನೆ ನಡೆದಿದ್ದು, ಇದೀಗ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಅವನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು 42 ವರ್ಷದ ಮೊಹಮ್ಮದ್ ಫಕ್ರುದ್ದೀನ್ ಎಂದು ಗುರುತಿಸಲಾಗಿದೆ. ಈತ ಇಂಡಿಗೊ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಿದ್ದು, ಪ್ರಯಾಣದ ವೇಳೆ ಶೌಚಾಲಯಕ್ಕೆ ತೆರಳಿ ಬೀಡಿ ಸೇದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ವಿಮಾನ ಸಿಬ್ಬಂದಿ ಕ್ರಮ ತೆಗೆದುಕೊಂಡಿದ್ದು, ಲ್ಯಾಂಡ್ ಆದ ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.