ಮಂಗಳೂರು ಅಗಸ್ಟ್ 16 : ದೇಶದಲ್ಲಿ ಈವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡುಗಳ ಮಾನ್ಯತೆ ರದ್ದುಗೊಳಿಸಲಾಗಿದ್ದು, ಆಧಾರ್ ಕಾರ್ಡ್ ನೊಂದಣಿ ಹಾಗೂ ನವೀಕರಣ ನಿಯಂತ್ರಣ ಕಾಯ್ದೆ 2016 ರ ಸೆಕ್ಷನ್ 27 ಹಾಗೂ 28 ಪ್ರಕಾರ ಆಧಾರ್ ಕಾರ್ಡ್ ನೊಂದಣಿಯಲ್ಲಿ ಕೆಲವು ನೂನ್ಯತೆಗಳಿರುವ ಕಾರಣಕ್ಕಾಗಿ ಕಾರ್ಡುಗಳ ಮಾನ್ಯತೆ ರದ್ದುಪಡಿಸಿರುವುದಾಗಿ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಪಿ.ಪಿ. ಚೌಧರಿ ರಾಜ್ಯಸಭೆಯಲ್ಲಿ ಈ ವಿಚಾರವನ್ನು ಮಂಡಿಸಿದ್ದಾರೆ.

ನೊಂದಣಿ ಮತ್ತು ನವೀಕರಣ ನಿಯಂತ್ರಣ ಕಾಯ್ದೆ 2016 ಸೆಕ್ಷನ್ 27ಮತ್ತು 28 ಪ್ರಕಾರ ಯಾವುದೇ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಪಡೆದಿದ್ದಲ್ಲಿ, ಅಲ್ಲವೇ ನೊಂದಣಿ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದಲ್ಲಿ ಆಧಾರ್ ಕಾರ್ಡ್ ನ್ನು ರದ್ದುಪಡಿಸಲಾಗುವುದು ಎಂದು ಆಧಾರ್ ಕಾರ್ಡ್ ವಿತರಿಸುವ ಯು.ಐ.ಡಿ.ಎ.ಐ ಸ್ಪಷ್ಟಪಡಿಸಿದೆ.

ತಮ್ಮಲ್ಲಿರುವ ಕಾರ್ಡ್ ಮಾನ್ಯವಾಗಿದೆಯೋ ಎನ್ನುವುದನ್ನು ಖಾತ್ರಿ ಪಡಿಸಲು ಯು.ಐ.ಡಿ.ಎ.ಐ ಸೈಟ್ ಗೆ ಭೇಟಿಕೊಟ್ಟು , ಅದರಲ್ಲಿರುವ ನೀಡಿರುವ ಮಾರ್ಗದರ್ಶನದಂತೆ ಮುಂದುವರಿದಲ್ಲಿ ತಮ್ಮಲ್ಲಿರುವ ಕಾರ್ಡ್ ಮಾನ್ಯವೇ, ಅಮಾನ್ಯವೇ ಎನ್ನುವುದು ತಿಳಿಯಲಿದೆ.

ನಿಮ್ಮ ಕಾರ್ಡ್ ಮಾನ್ಯತೆ ಚೆಕ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://resident.uidai.net.in/aadhaarverification

 

Facebook Comments

comments