Connect with us

LATEST NEWS

ಆಳ ಸಮುದ್ರದಲ್ಲಿ ಮುಳುಗಡೆಯಾದ ಮೀನುಗಾರಿಕಾ ಬೋಟ್ 8 ಮಂದಿ ರಕ್ಷಣೆ

ಆಳ ಸಮುದ್ರದಲ್ಲಿ ಮುಳುಗಡೆಯಾದ ಮೀನುಗಾರಿಕಾ ಬೋಟ್ 8 ಮಂದಿ ರಕ್ಷಣೆ

ಮಂಗಳೂರು ಡಿಸೆಂಬರ್ 10: ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ಸಂಭವಿಸಿದೆ. ಅರಬ್ಬೀ ಸಮುದ್ರದ ತೀರದಿಂದ ಸುಮಾರು 32 ನಾಟಿಕಲ್ ಮೈಲ್ ದೂರ ದಲ್ಲಿ ಈ ಘಟನೆ ಸಂಭವಿಸಿದೆ.

ಮದರ್ ಇಂಡಿಯಾ ಎಂಬ ಹೆಸರಿನ ಬೋಟ್ ಮುಳುಗಡೆಯಾದ ಬೋಟ್ ಆಗಿದ್ದು , ಬೋಟ್ ನಲ್ಲಿ ಎಲ್ಲಾ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರಿನಿಂದ ನಾಲ್ಕು ದಿನಗಳ ಹಿಂದೆ ಮದರ್ ಇಂಡಿಯಾ ಎಂಬ ಹೆಸರಿನ ಬೋಟ್ ಅರಬ್ಬೀ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಈ ಸಂದರ್ಭದಲ್ಲಿ ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ತಾಂತ್ರಿಕ ದೋಷ ಸರಿಪಡಿಸಲಾಗದ ಕಾರಣ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದು, ಬೋಟ್ ನಲ್ಲಿ 8 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಬೇರೆ ಬೋಟ್ ಮೀನುಗಾರಿಕೆಗೆ ಆಳಸಮುದ್ರಕ್ಕೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಬೋಟ್ ನಲ್ಲಿ ಎಲ್ಲಾ 8 ಮಂದಿ ಮೀನುಗಾರರನ್ನು ಬೆರೆ ಮೀನುಗಾರಿಕಾ ಬೋಟ್ ನವರು ರಕ್ಷಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *