Connect with us

    LATEST NEWS

    ಮುಂಬೈ – ಬಿರುಗಾಳಿಗೆ ಮುರಿದು ಬಿದ್ದ ಬೃಹತ್ ಹೋರ್ಡಿಂಗ್ – 8 ಮಂದಿ ಸಾವು

    ಮುಂಬೈ ಮೇ 13: ಮುಂಬೈನಲ್ಲಿ ಬಿಸಿದ ಬಿರುಗಾಳಿಗೆ ದೊಡ್ಡದಾದ ಹೊರ್ಡಿಂಗ್ ಒಂದು ಕುಸಿದು ಬಿದ್ದಿದ್ದು, 8 ಮಂದಿ ಸಾವನಪ್ಪಿ 100ಕ್ಕೂ ಅಧಿಕ ಮಂದಿ ಸಿಲುಕಿದ ಘಚನೆ ಮುಂಬೈನ ಘಾಟ್ಕೊಪರ್‌ ಪ್ರದೇಶದಲ್ಲಿ ನಡೆದಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


    ಘಾಟ್ಕೋಪರ್ ಪೂರ್ವದ ಪಂತ್ ನಗರದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಪೊಲೀಸ್ ಗ್ರೌಂಡ್ ಪೆಟ್ರೋಲ್ ಬಂಕ್ ಮೇಲೆ ಹೋರ್ಡಿಂಗ್ ಬಿದ್ದಿದೆ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಹೇಳಿದೆ.
    ಈ ಸಂಬಂಧ ಜಾಹೀರಾತು ಕಂಪನಿ ಇಗೊ ಮೀಡಿಯಾ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವಡಾಲಾದಲ್ಲಿ ನಿರ್ಮಾಣ ಹಂತದ ಲೋಹದ ಪಾರ್ಕಿಂಗ್ ಟವರ್ ರಸ್ತೆ ಮೇಲೆ ಕುಸಿದು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply