MANGALORE
ಮಂಗಳೂರಿನಲ್ಲಿ 7 ನೇ ರಾಷ್ಟ್ರೀಯ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾವಳಿ ಆರಂಭ

ಮಂಗಳೂರಿನಲ್ಲಿ 7 ನೇ ರಾಷ್ಟ್ರೀಯ ಲಗೋರಿ ಚಾಂಪಿಯನ್ ಶಿಪ್ ಪಂದ್ಯಾವಳಿ ಆರಂಭ
ಮಂಗಳೂರು,ಜನವರಿ 07 : ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಹಳ್ಳಿ ಸೊಗಡಿನ ಕ್ರೀಡೆ ಲಗೋರಿ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭಗೊಂಡಿದೆ.
ಅಪ್ಪಟ ದೇಶಿ ಕ್ರೀಡೆಗೆ ಈಗ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು ಮಂಗಳೂರಿನ ಕರಾವಳಿ ಮೈದಾನಿನಲ್ಲಿ ಪಾಥ್ ವೇ ತಂಡವು ಅಮೆಚೂರ್ ಲಗೋರಿ ಫೆಡರೇಶನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿಸಿರುವ 7 ನೇ ರಾಷ್ಟ್ರೀಯ ಲಗೋರಿ ಚಾಂಪಿಯನ್ ಗೆ ಮಂಗಳೂರು ಮೆಯರ್ ಕವಿತಾ ಸನಿಲ್ ಅವರು ಚಾಲನೆ ನೀಡಿದರು.

7 ನೇ ಸೀನಿಯರ್ ನ್ಯಾಷನಲ್ ಲೆವೆಲ್ ಲಗೋರಿ ಟೂರ್ನಮೆಂಟ್ ಇದಾಗಿದ್ದು 2 ದಿನಗಳಕಾಲ ನಡೆಯಲಿದೆ.
ಈ ರಾಷ್ಟ್ರೀಯ ಲಗೋರಿ ಪಂದ್ಯದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಹೊಸದಿಲ್ಲಿ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಾಂಡಿಚೇರಿ, ವಿದರ್ಭ, ತೆಲಂಗಾಣ, ತಮಿಳುನಾಡು, ದಾದರ್ ಮತ್ತು ಹವೇಲಿ, ಛತ್ತೀಸ್‍ಗಡ ಗೋವಾ ಸೇರಿದಂತೆ 14 ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ರಾಷ್ಟ್ರಮಟ್ಟದ ಲಗೋರಿ ಕ್ರೀಡಾಕೂಟದ ಮೊದಲ ದಿನ ಪುರುಷರ ವಿಭಾಗದಲ್ಲಿ ಛತ್ತಿಸ್‍ಗಡ ರಾಜ್ಯದ ಎದುರು ಕರ್ನಾಟಕ, ದೆಹಲಿ ಎದುರು ತೆಲಂಗಾಣ, ಹರ್ಯಾಣದ ಎದುರು ಮಹಾರಾಷ್ಟ್ರ, ಮಧ್ಯಪ್ರದೇಶದ ಎದುರು ಆಂಧ್ರಪ್ರದೇಶ, ಛತ್ತೀಸ್‍ಗಡದ ಎದುರು ದಾದರ್ ಮತ್ತು ಹವೇಲಿ ತಂಡ ಜಯಗಳಿಸಿತು.
ಕರ್ನಾಟಕದ ಎದುರು ಹರ್ಯಾಣ, ದೆಹಲಿ ಎದುರು ದಾದರ್ ಹವೇಲಿ, ಆಂಧ್ರಪ್ರದೇಶದ ಎದುರು ತಮಿಳುನಾಡು, ಮಧ್ಯಪ್ರದೇಶದ ಎದುರು ವಿದರ್ಭ, ವಿದರ್ಭದ ಎದುರು ಪಾಂಡಿಚೇರಿ, ಮಧ್ಯಪ್ರದೇಶದ ಎದುರು ಆಂಧ್ರಪ್ರದೇಶದ ತಂಡ ಜಯಗಳಿಸಿದವು.
ಮಹಿಳೆಯರ ವಿಭಾಗದಲ್ಲಿ ಪಾಂಡಿಚೇರಿ ಎದುರು ಕರ್ನಾಟಕ ತಂಡ ಜಯಗಳಿಸಿದೆ.