Connect with us

LATEST NEWS

ಸಿಎಂ ಗಾದಿಗೇರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ…ಚಂದ್ರಬಾಬುನಾಯ್ಡು ಶಪಥ

ಆಂಧ್ರಪ್ರದೇಶ : ಅಧಿಕಾರದಲ್ಲಿರುವ ವೈಎಸ್ ಆರ್ ಪಿ ಪಕ್ಷದ ಸದಸ್ಯರ ವೈಯುಕ್ತಿಕ ದಾಳಿಗೆ ಅಪಮಾನದಿಂದ ನೊಂದ ಆಂಧ್ರಪ್ರದೇಶ ಮಾಜಿ ಸಿಎಂ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಮತ್ತೆ ಸಿಎಂ ಗಾದಿಗೇರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಶಪಥ ಗೈದಿದ್ದಾರೆ.


ವಿರೋಧಪಕ್ಷದ ನಾಯಕರಾಗಿರೂ ಚಂದ್ರಬಾಬು ನಾಯ್ಡು ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯರು ತಮ್ಮ ಮೇಲೆ ಮಾಡುತ್ತಿರುವ ನಿರಂತರ ನಿಂದನೆಯಿಂದ ತಾವು ಮನನೊಂದಿರುವುದಾಗಿ ಸದನದಲ್ಲಿ ಭಾವುಕವಾಗಿ ನುಡಿದ ಅವರು, ಸಚಿವ ಕೊಡಾಲಿ ನಾನಿ ಚಂದ್ರಬಾಬು ಲುಚ್ಚಾ ಎನ್ನುತ್ತಿದ್ದರೆ ಮತ್ತೊಂದೆಡೆ ಮತ್ತೊಬ್ಬ ಸಚಿವ ಕನ್ನಬಾಬು ಸೇರಿದಂತೆ ಶಾಸಕರು ತಮ್ಮದೇ ಶೈಲಿಯಲ್ಲಿ ಖಾರವಾದ ವಾಗ್ದಾಳಿ ನಡೆಸುತ್ತಿದ್ದಾರೆ.

ನನ್ನ ಮೇಲೆ ಮಾತ್ರವಲ್ಲದೇ ನನ್ನ ಕುಟುಂಬಸ್ಥರ ವಿರುದ್ಧ ನನ್ನ ಪತ್ನಿ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಆಘಾತವಾಗಿದ್ದು, ನಾನು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಸದನಕ್ಕೆ ಕಾಲಿಡುವುದಿಲ್ಲ ಎಂದು ಭಾವುಕರಾಗಿ ಶಪಥ ಮಾಡಿದ್ದಾರೆ.

ದೊಡ್ಡ ದೊಡ್ಡ ನಾಯಕರೊಂದಿಗಾಗದ ಎಂದಿಗೂ ಎದುರಿಸದ ಅಪಮಾನಗಳನ್ನು ಈಗ ಎದುರಿಸುತ್ತಿದ್ದೇವೆ. ನಿನ್ನೆ ಕೂಡ ಮುಖ್ಯಮಂತ್ರಿ ಜಗನ್ ಅವರು ಸದನಕ್ಕೆ ಗೈರಾದ ಕುರಿತು ಕೆಟ್ಟದಾಗಿ ನನ್ನ ಬಗ್ಗೆ ಮಾತನಾಡಿದರು. ಈ ಸದನದಲ್ಲಿ ಹೇಳಲಾಗದ ಅವಮಾನಗಳಿಗೆ ಒಳಗಾದ ಅನೇಕ ಸನ್ನಿವೇಷಗಳಿವೆ. ವೈಯಕ್ತಿಕವಾಗಿ ಮತ್ತು ಪಕ್ಷದ ದೃಷ್ಟಿಯಿಂದ ಟೀಕಿಸುತ್ತಿದ್ದಾರೆ ಎಂದು ಗದ್ಗಧಿತರಾಗಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *