Connect with us

    KARNATAKA

    ಮಂಡ್ಯ – ಲಾರಿ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ 5 ಸಾವು

    ಮಂಡ್ಯ: ಲಾರಿ ಮತ್ತು ಆಟೋ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಲ್ಲಿ 5 ಜನ ಸಾವನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಲ ಮಾಕನ ಹಳ್ಳಿ ಗೇಟ್ ಬಳಿ ನಡೆದಿದೆ.


    ಮೃತರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮುತ್ತಮ್ಮ (45), ಬಸಮ್ಮಣಿ (30), ವೆಂಕಟೇಶ (25), ಎರಡು ವರ್ಷದ ಗಂಡು ಮಗು ಹಾಗೂ ಎಂಟು ವರ್ಷದ ಹೆಣ್ಣು ಮಗು.

    ಲಾರಿ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರಂತ ಘಟಿಸಿದೆ. ಅಪಘಾತದ ತೀವ್ರತೆಗೆ ಆಟೋ ನಜ್ಜು ಗುಜ್ಜಾಗಿದೆ. ಎದುರಿನಿಂದ ಬಂದ ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ಅನಾಹುತ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply