LATEST NEWS
ತಲೆಗೆ ಕಟ್ಟುವ ರಿಬ್ಬನ್ ಬಳಸಿ ಆತ್ಮಹತ್ಯೆ ಮಾಡಿಕೊಂಡ 5ನೇ ತರಗತಿ ವಿಧ್ಯಾರ್ಥಿನಿ…!

ತಲೆಗೆ ಕಟ್ಟುವ ರಿಬ್ಬನ್ ಬಳಸಿ ಆತ್ಮಹತ್ಯೆ ಮಾಡಿಕೊಂಡ 5ನೇ ತರಗತಿ ವಿಧ್ಯಾರ್ಥಿನಿ…!
ಮಂಗಳೂರು ನವೆಂಬರ್ 28: 5ನೇ ತರಗತಿ ಕಲಿಯುತ್ತಿರುವ ಬಾಲಕಿಯೊಬ್ಬಳು ತಲೆ ಕೂದಲು ಕಟ್ಟುವ ರಿಬ್ಬನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ದ್ರುವಿ (10) ಎಂದು ಗುರುತಿಸಲಾಗಿದೆ. ಮೂಲ್ಕಿ ಠಾಣಾ ವ್ಯಾಪ್ತಿಯ ಐಕಳ ಕಮ್ಮಾಜೆಯಲ್ಲಿ ನಿನ್ನೆ ನಡೆದಿದೆ. ಬಾಲಕಿ ದ್ರುವಿ ಕಿನ್ನಿಗೋಳಿಯ ಮೇರಿ ವೆಲ್ ಅಂಗ್ಲ ಮಾದ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ನಿನ್ನೆ ಕಿರೆ ಚರ್ಚ್ ನ ವಾರ್ಷಿಕ ಹಬ್ಬದ ಕಾರಣ ಶಾಲೆಗೆ ರಜೆ ಇತ್ತು. ಹಾಗಾಗಿ ಸಂಜೆ ದ್ರುವಿ ಮತ್ತು ದ್ರುವಿಯ ಅಜ್ಜಿ ಹಾಗೂ ಒಂದು ವರ್ಷದ ಪುಟ್ಟ ಮಗು ಮಾತ್ರ ಮನೆಯಲ್ಲಿದ್ದರು.

ಒಟ್ಟಾಗಿ ಮೊಮ್ಮಕ್ಕಳು ಅಜ್ಜಿಯೊಂದಿಗೆ ಟಿ.ವಿ.ನೊಡುತ್ತಿದ್ದ ಸಂದರ್ಭ ಕರೆಂಟ್ ಹೋಗಿದೆ. ಈ ಹಿನ್ನಲೆಯಲ್ಲಿ ಅಜ್ಜಿ ಧ್ರುವಿಗೆ ಓದಿಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಮನನೊಂದು ಹುಡುಗಿ ರೂಮಿಗೆ ಹೋಗಿದ್ದಾಳೆ. ದ್ರುವಿ ಕೋಣೆಗೆ ಹೋದವಳು ಕರೆಂಟ್ ಬರುವಾಗಲೂ ಹೊರಗೆ ಬರದ ಕಾರಣ ಕೋಣೆಯಲ್ಲಿ ನೋಡುವಾಗ ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ತಲೆಗೆ ಕಟ್ಟುವ ರಿಬ್ಬನ್ ನನ್ನು ಕೊಣೆಯ ಕಿಟಕಿಗೆ ಕಟ್ಟಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.