ಕೌಟುಂಬಿಕ ಕಲಹಕ್ಕೆ ಪತ್ನಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ

ಉಡುಪಿ ನವೆಂಬರ್ 27:ಕೌಟುಂಬಿಕ ಕಲಹಕ್ಕೆ ಪತ್ನಿ ಮಕ್ಕಳನ್ನು ಕೊಂದು ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ಗೋಳಿಯಾಂಗಡಿ ಎಂಬಲ್ಲಿ ಘಟನೆ ನಡೆದಿದೆ.

ಮೃತರನ್ನು ಸೂರ್ಯನಾರಾಯಣ ಭಟ್ (50) ಮಾನಸಿ (40) ಸುಧೀಂದ್ರ (14) ಸುಧೀಶ್ (8) ಎಂದು ಗುರುತಿಸಲಾಗಿದೆ.
ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಸೂರ್ಯನಾರಾಯಣ ಭಟ್ ಹಾಗೂ ಅವರ ಹೆಂಡತಿ ನಡುವೆ ಕೌಂಟುಬಿಕ ಕಲಹ ನಡೆಯುತ್ತಿತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಬೇಸತ್ತ ಸೂರ್ಯನಾರಾಯಣ ಭಟ್ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ವಿಷ ನೀಡಿದ್ದಾನೆ. ವಿಷ ಸೇವಿಸಿ ಅಸ್ವಸ್ಥರಾದ ಮೂವರನ್ನು ರಾಡ್ ನಿಂದ ಹ್ಲಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ತಾನು ನೇಣಿಗೆ ಶರಣಾಗಿದ್ದಾನೆ. ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.