LATEST NEWS
ಪೋರಂ ಪಿಜ್ಜಾ ಮಾಲ್ ಹಲ್ಲೆ ಪ್ರಕರಣ 5 ಜನ ಆರೋಪಿಗಳ ಬಂಧನ

ಪೋರಂ ಪಿಜ್ಜಾ ಮಾಲ್ ಹಲ್ಲೆ ಪ್ರಕರಣ 5 ಜನ ಆರೋಪಿಗಳ ಬಂಧನ
ಮಂಗಳೂರು ಸೆಪ್ಟೆಂಬರ್ 26: ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಯ್ಯುದ್ದಿನ್ ಸಪ್ವಾನ್, ಮಹಮ್ಮದ್ ಮರ್ಝಕ್, ಅಬ್ದುಲ್ ರಹೀಂ ಶಾದ್, ಫರಾನ್ ಫಾರೂಕ್ ಎಂದು ಗುರುತಿಸಲಾಗಿದ್ದು, ಬಂಧಿತರಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಕೂಡ ಸೇರಿದ್ದಾನೆ.

ಮಂಗಳೂರಿನ ಪೋರಂ ಪಿಜ್ಜಾ ಮಾಲ್ ನಲ್ಲಿ ಯುವತಿಯನ್ನು ಚುಡಾಯಿಸಿದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ಗ್ಯಾಂಗ್ ಯುವಕನೊಬ್ಬನಿಹೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕ ಮಂಜುನಾಥ್ ಪ್ರಕರಣ ದಾಖಲಿಸಿದ್ದರು. ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲ್ಲೆ ನಡೆಸಿದ್ದ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳ ಗ್ಯಾಂಗ್ ನ 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ.