Connect with us

    BANTWAL

    ಬಂಟ್ವಾಳ – ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಪುಟ್ಟ ಬಾಲಕಿ ವಿಧಿವಶ

    ಬಂಟ್ವಾಳ ಸೆಪ್ಟೆಂಬರ್ 24 : ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಎಲ್ ಕೆಜಿ ಓದುತ್ತಿರುವ ಪುಟ್ಟ ಬಾಲಕಿ ನಿಧನಳಾಗಿದ್ದಾಳೆ. ಮೃತ ಬಾಲಕಿಯನ್ನು ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.


    ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದ ಈಕೆ ಅನಾರೋಗ್ಯದಿಂದ ಇದ್ದು ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಭಾನುವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply