LATEST NEWS
ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕರೋನಾ ಸೊಂಕು ಪತ್ತೆ
ಮಂಗಳೂರಿನಲ್ಲಿ ಮತ್ತೆ ನಾಲ್ವರಲ್ಲಿ ಕರೋನಾ ಸೊಂಕು ಪತ್ತೆ
ಮಂಗಳೂರು ಮಾರ್ಚ್ 24: ಮಂಗಳೂರಿನಲ್ಲಿ ಕರೋನಾ ಸೊಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 4 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಮಂಗಳೂರಿನಲ್ಲಿ 5 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತಿಂಗಳ 19 ರಂದು ದುಬೈನಿಂದ ಬಂದಿದ್ದ ವಿಮಾನದಲ್ಲಿದ್ದ ಭಟ್ಕಳ ಮೂಲದ ವ್ಯಕ್ತಿಯ ಜೊತೆ ಈ ನಾಲ್ವರು ಪ್ರಯಾಣಿಸಿದ್ದರು.
ಈ ವಿಮಾನದಲ್ಲಿದ್ದ ಇನ್ನುಳಿದವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅದಲ್ಲದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಾಗಿರುವ ಕಂಟ್ರೋಲ್ ರೂಂ ಮೂಲಕ ಆ ವಿಮಾನದಲ್ಲಿ ಬಂದಿದ್ದ ಇತರ ಪ್ರಯಾಣಿಕರ ಕುರಿತು ಟ್ರ್ಯಾಕಿಂಗ್ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಉಳಿದ ಪ್ರಯಾಣಿಕರ ಮೇಲೂ ನಿಗಾ ಇರಿಸಲಾಗಿದೆ. ಸೊಂಕಿತರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.
ಕರೋನಾ ಸೊಂಕಿತರ ಮಾಹಿತಿ
ಪೇಶಂಟ್ ನಂಬರ್ 02- 32 ವರ್ಷ ಪ್ರಾಯದ ವ್ಯಕ್ತಿ ಕಾಸರಗೋಡು ನಿವಾಸಿಯಾಗಿದ್ದು ಮಾರ್ಚ್ 20 ರಂದು ಸ್ಪೈಸ್ ಜೆಟ್ ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಿದ ಸಂದರ್ಭ ಶಂಕಿತ ಕರೋನಾ ಲಕ್ಷಣ ಕಂಡು ಬಂದಿದ್ದು, ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಐಸೋಲೇಶನ್ ವಾರ್ಡ್ ನಲ್ಲಿಡಲಾಗಿದೆ.
ಪೇಶಂಟ್ ನಂಬರ್ 03 – 47 ವರ್ಷ ಪ್ರಾಯದ ವ್ಯಕ್ತಿ ಕಾಸರಗೋಡು ನಿವಾಸಿಯಾಗಿದ್ದು ಮಾರ್ಚ್ 19 ರಂದು ಎರ್ ಇಂಡಿಯಾ ವಿಮಾನದ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಿದ ಸಂದರ್ಭ ಶಂಕಿತ ಕರೋನಾ ಲಕ್ಷಣ ಕಂಡು ಬಂದಿದ್ದು, ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಐಸೋಲೇಶನ್ ವಾರ್ಡ್ ನಲ್ಲಿಡಲಾಗಿದೆ.
ಪೇಶಂಟ್ ನಂಬರ್ 04- 23 ವರ್ಷ ಪ್ರಾಯದ ವ್ಯಕ್ತಿ ಕಾಸರಗೋಡು ನಿವಾಸಿಯಾಗಿದ್ದು ಮಾರ್ಚ್ 20 ರಂದು ಸ್ಪೈಸ್ ಜೆಟ್ ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಿದ ಸಂದರ್ಭ ಶಂಕಿತ ಕರೋನಾ ಲಕ್ಷಣ ಕಂಡು ಬಂದಿದ್ದು, ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಐಸೋಲೇಶನ್ ವಾರ್ಡ್ ನಲ್ಲಿಡಲಾಗಿದೆ.
ಪೇಶಂಟ್ ನಂಬರ್ 04- 70 ವರ್ಷ ಪ್ರಾಯದ ಮಹಿಳೆ ಕಾಸರಗೋಡು ನಿವಾಸಿಯಾಗಿದ್ದು ಮಾರ್ಚ್ 09 ರಂದು ಸೌದಿಯಿಂದ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಐಸೋಲೇಶನ್ ವಾರ್ಡ್ ನಲ್ಲಿಡಲಾಗಿದೆ.