LATEST NEWS
ಕೊಲೆಗೆ ಸಂಚು ರೂಪಿಸುತ್ತಿದ್ದ 4 ಮಂದಿ ಆರೋಪಿಗಳ ಬಂಧನ
ಕೊಲೆಗೆ ಸಂಚು ರೂಪಿಸುತ್ತಿದ್ದ 4 ಮಂದಿ ಆರೋಪಿಗಳ ಬಂಧನ
ಮಂಗಳೂರು ಎಪ್ರಿಲ್ 2: ಮನೆಯಲ್ಲಿ ಮಾರಕಾಸ್ತ್ರಗಳನ್ನು ಇರಿಸಿಕೊಂಡು ಕೊಲೆಗೆ ಸಂಚು ರೂಪಿಸುತ್ತಿದ್ದ 4 ಮಂದಿ ಆರೋಪಿಗಳನ್ನು ಮಂಗಳೂರಿನ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಹೊರವಲಯದ ಕೃಷ್ಣಾಪುರದ ಕಾಟಿರ್ಪಳ್ಳ ನಿವಾಸಿ ಸಂದೀಪ್ ದೇವಾಡಿಗ (29), ಉಡುಪಿ ಬ್ರಹ್ಮಾವರದ ನಿವಾಸಿ ಆಕಾಶ್ (21) , ಬಂಟ್ವಾಳದ ನಿವಾಸಿ ಚರಣ್ ರಾಜ್ (22) ಹಾಗು ಧರ್ಮಸ್ಥಳದ ನಿವಾಸಿ ರಕ್ಷಿತ್ ಭಂಡಾರಿ ಎಂದು ಗುರುತಿಸಲಾಗಿದೆ.
ಕಾಟಿಪಳ್ಳದ ಮನೆಯೊಂದರಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಲಾಗಿರುವ ಬಗ್ಗೆ ಪಣಂಬೂರು ಪೊಲೀಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನೆಲೆಯಲ್ಲಿ ರೌಡಿ ನಿಗ್ರಹದಳದ ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಟಿಪಳ್ಳದ ಸಂದೀಪ್ ಮನೆಯ ಮೇಲೆ ದಾಳಿನಡೆಸಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ 3 ತಲವಾರುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಬಂಧಿತ ಆರೋಪಿ ಸಂದೀಪ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಆಕಾಶ , ಚರಣ್ ರಾಜ್ ಹಾಗು ರಕ್ಷಿತ್ ಭಂಡಾರಿ ಅವರಲ್ಲಿ ನಾಡ ಪಿಸ್ತೂಲ್ ಗಳಿರುವದು ಗೊತ್ತಾಗಿದೆ. ಈ ಹಿನ್ನಲೆಯೆಲ್ಲಿ ಆಕಾಶ್ , ಚರಣ್ ರಾಜ್ ಹಾಗು ರಕ್ಷಿತ್ ಭಂಡಾರಿ ಅವರನ್ನು ಬಂಧಿಸಿ ಅವರಿಂದ 2 ನಾಡ ಪಿಸ್ತೂಲ್ ಹಅಗು 10 ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
You must be logged in to post a comment Login