LATEST NEWS
ಬೆಂಗಳೂರಿನಲ್ಲಿ ಉಡುಪಿ ಮೂಲದ ಯುವ ಚಾರ್ಟರ್ಡ್ ಅಕೌಂಟೆಂಟ್ ರಾಕೇಶ್ ಕಾಮತ್ ನಿಧನ
ಉಡುಪಿ ಫೆಬ್ರವರಿ 06: ಉಡುಪಿ ಶಿರ್ವ ಮೂಲದ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವ ಚಾರ್ಟರ್ಡ್ ಅಕೌಂಟೆಂಟ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶಿರ್ವ ಮಂಚಕಲ್ ನಿವಾಸಿ ಸಿಎ ರಾಕೇಶ್ ಕಾಮತ್ (32) ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಇವರು ಖ್ಯಾತ ಉದ್ಯಮಿ , ಬಾಲಕೃಷ್ಣ ಕಾಮತ್ ಅವರ ಪುತ್ರ.ಕೆಲಸದ ನಿಮಿತ್ತ ಹೈದರಾಬಾದ್ ಗೆ ತೆರಳಿದ್ದ ಅವರು ಮನೆಗೆ ವಾಪಸ್ ಆದಾಗ ಅಸ್ವಸ್ಥಗೊಂಡಿದ್ದರು.
ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.ಬಳಿಕ ಪತ್ನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ರಾಕೇಶ್ ಅವರು ಪತ್ನಿ ಸಿಎ ಶೃತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.