Connect with us

    LATEST NEWS

    ಭೀಕರ ಚಳಿಗೆ ಅಮೆರಿಕದಲ್ಲಿ 31 ಮಂದಿ ಸಾವು

    ವಾಷಿಂಗ್ಟನ್, ಡಿಸೆಂಬರ್ 26: ಭೀಕರ ಶೀತಮಾರುತವು ಕ್ರಿಸ್‌ಮಸ್ ದಿನದಂದೇ ಲಕ್ಷಾಂತರ ಅಮೆರಿಕರನ್ನು ಸಂಕಷ್ಟಕ್ಕ ದೂಡಿದೆ. ಪೂರ್ವ ಅಮೆರಿಕದ ಕೆಲ ಭಾಗಗಳಲ್ಲಿ ತೀವ್ರ ಹಿಮ ಮತ್ತು ಚಳಿ ಆವರಿಸಿದ್ದು, ಹವಾಮಾನ ಸಂಬಂಧಿತ ಸಾವುಗಳ ಸಂಖ್ಯೆ 31ಕ್ಕೆ ಏರಿದೆ.

    ಪಶ್ಚಿಮ ನ್ಯೂಯಾರ್ಕ್‌ನ ಬಫೆಲೊ ನಗರದಲ್ಲಿ ಹಿಮಪಾತ ಹೆಚ್ಚಿದ್ದು, ನಗರವನ್ನೇ ಮುಳುಗಿಸಿದೆ, ಹಲವೆಡೆ ತುರ್ತು ಸೇವೆಗಳನ್ನು ಒದಗಿಸಲು ಸಹ ಸಾಧ್ಯವಾಗುತ್ತಿಲ್ಲ. ‘ಯುದ್ಧ ವಲಯದ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಮತ್ತು ರಸ್ತೆಗಳ ಬದಿಯಲ್ಲಿರುವ ವಾಹನಗಳ ಸ್ಥಿತಿ ಆಘಾತಕಾರಿಯಾಗಿದೆ’ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಹೇಳಿದರು. ಬಫೆಲೊದ ನಿವಾಸಿಯೂ ಆಗಿರುವ ಅವರು, ಅಲ್ಲಿ ಎಂಟು ಅಡಿ (2.4-ಮೀಟರ್) ಹಿಮದ ರಾಶಿ ಬಿದ್ದಿದ್ದು, ವಿದ್ಯುತ್ ಕಡಿತಗೊಂಡಿದೆ ಎಂದು ಹೇಳಿದ್ದಾರೆ.

    ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಹೋಚುಲ್, ಇಲ್ಲಿನ ನಿವಾಸಿಗಳು ಜೀವಕ್ಕೆ ಅಪಾಯದ ಪರಿಸ್ಥಿತಿಯಲ್ಲಿದ್ದಾರೆ. ಈ ಪ್ರದೇಶದ ಜನರು ಮನೆಯಿಂದ ಹೊರಬರದಂತೆ ಅವರು ಎಚ್ಚರಿಕೆ ನೀಡಿದರು. ಪೂರ್ವದ ರಾಜ್ಯಗಳಾದ್ಯಂತ 2,00,000ಕ್ಕೂ ಹೆಚ್ಚು ಜನರು ಕ್ರಿಸ್‌ಮಸ್ ಅನ್ನು ವಿದ್ಯುತ್ ಇಲ್ಲದೆ ಆಚರಿಸಿದರು.

    ವಾರಾಂತ್ಯ ಅಮೆರಿಕದ 48 ರಾಜ್ಯಗಳಲ್ಲಿ ತೀವ್ರ ಚಳಿ ಆವರಿಸಿದ್ದು, ತಾಪಮಾನ ಮೈನಸ್ ಡಿಗ್ರಿ ತಲುಪಿದೆ. ಸಾವಿರಾರು ವಿಮಾನಗಳು ರದ್ದಾಗಿದ್ದು, ಮನೆಗಳು ಹಿಮದಿಂದ ಸುತ್ತುವರಿದಿವೆ. ಕೊಲರಾಡೊದಲ್ಲಿ 4 ಮತ್ತು ನ್ಯೂಯಾರ್ಕ್‌ನಲ್ಲಿ 12 ಮಂದಿ ಸೇರಿ 9 ರಾಜ್ಯಗಳಲ್ಲಿ ಹವಾಮಾನ ಸಂಬಂಧಿತ ಸಾವುಗಳ ಸಂಖ್ಯೆ 31ಕ್ಕೆ ಏರಿದೆ.

    Share Information
    Advertisement
    Click to comment

    You must be logged in to post a comment Login

    Leave a Reply