Connect with us

    BANTWAL

    ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಅರೋಪ ಮೂವರ ಬಂಧನ

    ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಅರೋಪ ಮೂವರ ಬಂಧನ

    ಮಂಗಳೂರು ಸಪ್ಟೆಂಬರ್ 20 : 4 ನೇ ತರಗತಿಯ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ 3 ಮಂದಿ ಆರೋಪಿಗಳನ್ನು ದಕ್ಷಿಣಕ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಗೂಡಿನಬಳಿ ನಿವಾಸಿಗಳಾದ ಗುಜರಿ ವ್ಯಾಪಾರಿ ಶೇಖಬ್ಬ (65), ಅಂಬಾರಿ ಯಾನೆ ರಝಾಕ್ (35) ಹಾಗೂ ನವಾಝ್ (22) ಎಂದು ಗುರುತಿಸಲಾಗಿದೆ.

    ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ 4ನೇ ತರಗತಿ ಓದುತ್ತಿರುವ 9 ವರ್ಷ ಪ್ರಾಯದ ಅಪ್ರಾಪ್ತ ಬಾಲೆಯನ್ನು ಬಂಧಿತ ಮೂರು ಮಂದಿ ಆರೋಪಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

    ಬಂಟ್ವಾಳ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರು 9ರ ಹರೆಯದ ಬಾಲಕಿ ಇತ್ತೀಚೆಗೆ ಗೂಡಿನಬಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಮಕ್ಕಳೊಂದಿಗೆ ಆಡಿಕೊಂಡಿದ್ದ ಬಾಲಕಿಯನ್ನು ಆರೋಪಿ ರಝಾಕ್ ತನ್ನ ಮನೆಗೆ ಕರೆದು ಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಳೆ . ನಂತರ ಬಾಲಕಿಯನ್ನು ಮತ್ತೋಬ್ಬ ಆರೋಪಿ ಗುಜರಿ ವ್ಯಾಪಾರಿ ಶೇಖಬ್ಬ ಗುಜರಿ ತೆಗೆಯಲಿಕ್ಕಿದೆ ಎಂದು ಹೇಳಿ ಹೊಸ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಆತ ಹಾಗು ಇನ್ನೊಬ್ಬ ಆರೋಪಿ ನವಾಝ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

    ಬಾಲಕಿಯ ವರ್ತನೆ ಹಾಗೂ ದೇಹದಲ್ಲಿ ಉಂಟಾದ ಕೆಲವೊಂದು ಬೆಳವಣಿಗೆಗಳನ್ನು ಗಮನಿಸಿ ಮನೆ ಮಂದಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ದ ಕೃತ್ಯಗಳು ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯಿಂದ ಹೇಳಿಕೆ ಪಡೆದುಕೊಂಡ ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *