Connect with us

    LATEST NEWS

    ಸಿಎಂ ಕುಮಾರಸ್ವಾಮಿ ಭಯೋತ್ಪಾದಕನ ಮಾದರಿ ಹೇಳಿಕೆ ನೀಡುತ್ತಿದ್ದಾರೆ- ಶ್ರೀನಿವಾಸ ಪೂಜಾರಿ

    ಸಿಎಂ ಕುಮಾರಸ್ವಾಮಿ ಭಯೋತ್ಪಾದಕನ ಮಾದರಿ ಹೇಳಿಕೆ ನೀಡುತ್ತಿದ್ದಾರೆ- ಶ್ರೀನಿವಾಸ ಪೂಜಾರಿ

    ಉಡುಪಿ ಸೆಪ್ಟೆಂಬರ್ 20: ಮುಖ್ಯಮಂತ್ರಿ ಕುಮಾರಸ್ವಾಮಿ ಭಯೋತ್ಪಾದಕನ ಮಾದರಿಯ ಹೇಳಿಕೆ ನೀಡುತ್ತಿದ್ದಾರೆ. ಭಯೋತ್ಪಾದಕರ ರೀತಿಯಲ್ಲಿ ದಂಗೆ ಏಳುವುದಾಗಿ ಕರೆ ಕೊಡುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

    ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಎಸ್ ವೈ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ ವೈ ಮನೆಗೆ ಮುತ್ತಿಗೆ ಹಾಕಿದ್ದು, ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ಆಳುವ ಪಕ್ಷದ ಆಣತಿಯಂತೆ ಎಲ್ಲವೂ ನಡೆದಿದೆ ಎಂದು ಆರೋಪಿಸಿದರು. ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಇಂದು ನಡೆದಿದೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ವಾಗ್ದಾಳಿ‌ ನಡೆಸಿದ್ದಾರೆ.

    ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ. ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ. ರೇವಣ್ಣ ಮೇಲಿನ ಕೇಸಿಗೂ ಪುನರ್ ಜೀವ ಕೊಡ್ತೀರಾ? ಎಂದು ಅವರು ಪ್ರಶ್ನಿಸಿದರು.

    ನುಡಿದಂತೆ ನಡೆಯುವ ಸರ್ಕಾರ ನಿಮ್ಮದು ಎಂದು ಹೇಳುವ ಸಮ್ಮಿಶ್ರ ಸರಕಾರ ಇಡಿ ತನಿಖೆ ನಡೆಯುವಾಗ ಡಿಕೆ ಅಧಿಕಾರದಲ್ಲಿ ಇರುವುದು ಎಷ್ಟು ಸರಿ, ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply