BELTHANGADI
ಬೆಳ್ತಂಗಡಿ – ನಿಯಮ ಮೀರಿ ಅತಿಯಾದ ಸ್ಪೋಟಕ ದಾಸ್ತಾನು… ಭೀಕರ ಸ್ಪೋಟ ಕಾರಣ
ಬೆಳ್ತಂಗಡಿ ಜನವರಿ 30: ಬೆಳ್ತಂಗಡಿಯ ವೇಣೂರಿನಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಪೋಟದಲ್ಲಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಕಾರ್ಖಾನೆ ಮಾಲೀಕ ಬಶೀರ್ ನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಪಟಾಕಿ ಘಟಕದಲ್ಲಿ ನಿಮಯ ಮೀರಿ ಅತಿ ಹೆಚ್ಚು ಸ್ಪೋಟಕ ಸಾಮಾಗ್ರಿಗಳನ್ನು ಶೇಖರಿಸಿಟ್ಟಿದ್ದು ಇಷ್ಟು ದೊಡ್ಡ ಸ್ಪೋಟಕ್ಕೆ ಕಾರಣ ಎಂದು ಹೇಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕುಕ್ಕೆಡಿಯಲ್ಲಿದ್ದ ಸಾಲಿಡ್ ಫೈರ್ ವರ್ಕ್ ಎಂಬ ಹೆಸರಿನ ಪಟಾಕಿ ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಘಟಕದ ಮಾಲೀಕನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ.
ಈ ನಡುವೆ ಈ ಸ್ಪೋಟಕ್ಕೆ ನಿಯಮ ಮೀರಿ 200 ಕೆ.ಜಿ ಸ್ಪೋಟ ದಾಸ್ತಾನು ಇಟ್ಟಿದ್ದು ಕಾರಣ ಎಂದು ಹೇಳಲಾಗುತ್ತಿದೆ. ಕೇವಲ 15 ಕೆ.ಜಿಗೆ ಪರವಾನಿಗೆ ಪಡೆದು 200 ಕೆ.ಜಿ ಸ್ಟಾಕ್ ಇಟ್ಟಿದ್ದ ಮಾಲೀಕ ಬಶೀರ್, ಪಟಾಕಿಗಾಗಿ ಪೊಟ್ಯಾಸಿಯಂ ಕ್ಲೋರೈಟ್, ಪೊಟ್ಯಾಸಿಯಂ ನೈಟ್ರೇಟ್ ಬಳಕೆ, ಪಟಾಕಿ ಲೋಡಿಂಗ್ ವೇಳೆ ಒತ್ತಡ ಉಂಟಾಗಿ ಸ್ಪೋಟವಾಗಿರುವ ಸಾದ್ಯತೆ ಇದ್ದು, ಅತಿಯಾದ ಸ್ಪೋಟಕ ದಾಸ್ತಾನು ಇಟ್ಟ ಕಾರಣ ಭೀಕರ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ 85ಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಎಫ್ಎಸ್ಎಲ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಚಾರ್ಕೋಲ್, ಗಂಧಕ, ಅಲ್ಯೂಮಿನಿಯಂ ಪೌಡರ್ ಸಹಿತ ಹಲವು ವಸ್ತುಗಳು ವಶಕ್ಕೆ ಪಡೆಯಲಾಗಿದೆ . ಈ ಘಟಕದಲ್ಲಿ ಫೈರ್ ಸೇಫ್ಟಿ ಬಳಕೆ ಮಾಡದೇ ನಿಯಮ ಉಲ್ಲಂಘಿಸಿ ಪಟಾಕಿ ತಯಾರಿ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಮೈಸೂರು ಭಾಗದ ಕಾರ್ಯಕ್ರಮಕ್ಕೆ ಭಾರೀ ಪ್ರಮಾಣದಲ್ಲಿ ಪಟಾಕಿ ತಯಾರಿಗಾಗಿ ನಿಯಮ ಉಲ್ಲಂಘಿಸಿ ರಾಸಾಯನಿಕ ದಾಸ್ತಾನು ಇಟ್ಟಿದ್ದ ಬಶೀರ್ ಎಂದು ತಿಳಿದು ಬಂದಿದೆ.
You must be logged in to post a comment Login