Connect with us

  DAKSHINA KANNADA

  ಕೊಂಕಣ ರೈಲ್ವೇ ರೂವಾರಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಪುಣ್ಯತಿಥಿ ಮರೆತ ಕರಾವಳಿಯ ಜನಪ್ರತಿನಿಧಿಗಳು..!

  ಮಂಗಳೂರು ಜನವರಿ 30: ದೇಶ ಕಂಡ ಅಪ್ರತಿಮ ಮುಖಂಡ ದೇಶದ ಮಹಾನ್ ಸಮಾಜವಾದಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಪುಣ್ಯತಿಥಿ ನಿನ್ನೆ ಅಂದರೆ ಜನವರಿ 29, ಆದರೆ ಕರ್ನಾಟಕದ ಯಾವುದೇ ಜನಪ್ರತಿನಿಧಿಗಳು ಕೂಡ ಜಾರ್ಜ್ ಫೆರ್ನಾಂಡಿಸ್ ಅವರ ಪುಣ್ಯತಿಥಿ ಸ್ಮರಣೆಯನ್ನು ಸಾಮಾಜಿಕ ಜಾಲತಾಣದಲ್ಲೂ ಮಾಡಿಲ್ಲ.

  ಕರಾವಳಿಗೆ ಕೊಂಕಣ್ ರೈಲ್ವೆ ತಂದು ದೂರದ ಮುಂಬೈಯನ್ನು ಕರಾವಳಿಯ ಆರ್ಥಿಕತೆಗೆ ಜೋಡಿಸಿದ ಮಹಾನ್ ನಾಯಕ ಈಗ ಜನರ ಮನದಾಳದಿಂದ ಸಂಪೂರ್ಣವಾಗಿ ಮರೆಯಾಗಿದ್ದಾರೆ.
  ಕರಾವಳಿಯ ಯಾವುದೇ ನಾಯಕರು ಜನಪ್ರತಿನಿಧಿಗಳು ಕೂಡ ಜಾರ್ಜ್ ಫೆರ್ನಾಂಡಿಸ್ ಅವರ ಪುಣ್ಯತಿಥಿಯ ಕುರಿತಂತೆ ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ. ಎಲ್ಲರಿಗೂ ಮಂಡ್ಯದ ಹನುಮಧ್ವಜ ವಿವಾದವೇ ಹೆಚ್ಚಾಗಿತ್ತು.


  ಜಾರ್ಜ್ ಫೆರ್ನಾಂಡಿಸ್ ಬಾಲ್ಯದ ದಿನಗಳಲ್ಲಿ ಓಡಾಡಿದ ಮಂಗಳೂರಿನ ಬಿಜೈ ಚರ್ಚಿನಲ್ಲಿ ಮಾತ್ರ ಸೋಮವಾರದಂದು ಅಗಲಿದ ಮಹಾನ್ ನಾಯಕನಿಗೆ ಶೃದ್ದಾಂಜಲಿ ಸಲ್ಲಿಸಿ ಪುಣ್ಯ ಸ್ಮರಣೆ ಮಾಡಿದ್ದರು. ಉಳಿದಂತೆ ಬಿಜೆಪಿ, ಕಾಂಗ್ರೆಸ್, ಅಥವಾ ಯಾವುದೇ ಸಂಘ ಸಂಸ್ಥೆ ಕೂಡ ಜಾರ್ಜ್ ಫೆರ್ನಾಂಡಿಸನ್ನು ನೆನೆಸದ್ದೆ ಇದ್ದುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
  ಕೇಂದ್ರದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ಹೊಂದಿದ್ದ ಟ್ರೇಡ್ ಯೂನಿಯನಿಸ್ಟ್ ಆಗಿ ಫೈರ್‌ಬ್ರಾಂಡ್ ನಾಯಕ, ಜಾರ್ಜ್ ಮ್ಯಾಥ್ಯೂ ಫೆರ್ನಾಂಡಿಸ್ ಜನವರಿ 29, 2019 ರಂದು ನಿಧನರಾದರು. ಜನತಾ ದಳದ ಸದಸ್ಯ ಮತ್ತು ಸಮತಾ ಪಕ್ಷದ ಸಂಸ್ಥಾಪಕ, ಅವರು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಪ್ರತಿರೋಧಕ್ಕೆ ಹೆಸರುವಾಸಿಯಾಗಿದ್ದರು. ಕೈಗಾರಿಕೆಗಳ ಮಂತ್ರಿಯಾಗಿ ಅವರು ಕೋಕಾ ಕೋಲಾ ಮತ್ತು ಐಬಿಎಂ ಮುಂತಾದವುಗಳನ್ನು ಉಲ್ಲಂಘನೆಗಾಗಿ ದೇಶದಿಂದ ಓಡಿಸಿದರು. ಆದಾಗ್ಯೂ, ಎನ್‌ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ , ಸರ್ಕಾರದ ಸಂಚಾಲಕರಾಗಿ ವಾಜಪೇಯಿ ನೇತೃತ್ವದಲ್ಲಿ ಸುಭದ್ರ ಆಡಳಿತ ನೀಡಲು ಕಾರಣೀ ಕರ್ತರಾದರು.

  ದೇಶದ ರಕ್ಷಣಾ ಸಚಿವರಾಗಿ ಅವರು ಸಲ್ಲಿಸಿದ ಸೇವೆ ನಿಜಕ್ಕೂ ಅನುಪಮ.ಕಾರ್ಗಿಲ್ ಯುದ್ದದದಲ್ಲಿ ನೆರೆಯ ಪಾಕಿಸ್ಥಾನ ವಿರುದ್ದ ಭಾರತದ ಅಭೂತ ಪೂರ್ವ ಜಯಕ್ಕೂ ಜಾರ್ಜ್ ಕಾರಣರಾಗಿದ್ದರು. ಅವರ ಮತ್ತು ಪ್ರಧಾನಿ ವಾಜಪೇಯಿ, ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರ ಮಧ್ಯೆ ಒಂದು ಅನನ್ಯವಾದ ಸಂಬಂಧವಿತ್ತು..!  ಅದರಲ್ಲಿ ಅದಮ್ಯ ದೇಶ ಪ್ರೇಮದ ಬಲವಿತ್ತು!  ಜಾರ್ಜ್ ಫೆರ್ನಾಂಡಿಸ್ ಪೋಕ್ರಾನ್ ಅಣು ಪರೀಕ್ಷೆಯ ಸಂದರ್ಭದಲ್ಲಿ ವಾಜಪೇಯಿಯವರ ಜೊತೆಗೆ ಬಂಡೆಯಂತೆ ನಿಂತರು.  ಸಿಯಾಚಿನ್ ನೀರ್ಗಲ್ಲು ಪ್ರದೇಶಕ್ಕೆ ಹದಿನೆಂಟು ಸಲ ಭೇಟಿ ನೀಡಿದ ಏಕಮಾತ್ರ ರಕ್ಷಣಾ ಸಚಿವ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಧೀರ ಜಾರ್ಜ್ ಫೆರ್ನಾಂಡಿಸ್ ಇವತ್ತಿಗೆ ನಮ್ಮನ್ನು ಬಿಟ್ಟು ಅಗಲಿ 5 ವರ್ಷಗಳು ಸಂದಿವೆ…!   ತಮ್ಮ ಇಳಿವಯಸ್ಸಿನಲ್ಲೂ ಸಹ ಅಸ್ತಮಾವನ್ನು ಎದುರಿಸಿ ತಮ್ಮ ಭಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ ಸರಳ ಜಾರ್ಜ್ ಫೆರ್ನಾಂಡಿಸ್ ಇಂದು ಕೇವಲ ನೆನಪು ಮಾತ್ರ..!

   

  Share Information
  Advertisement
  Click to comment

  You must be logged in to post a comment Login

  Leave a Reply