Connect with us

    DAKSHINA KANNADA

    ಉಳ್ಳಾಲದ ಕೊಣಾಜೆಯ ಯುವತಿ ನಾಪತ್ತೆ, ದೂರು ದಾಖಲು..!

    ಉಳ್ಳಾಲ : ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಗ್ರಾಮದ 20 ವರ್ಷದ ಯುವತಿಯೋರ್ವಳು ಕಾಣೆಯಾಗಿದ್ದು ಈ ಬಗ್ಗೆ  ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಫ್ರಿನಾ (20) ಕಾಣೆಯಾದ ಯುವತಿಯಾಗಿದ್ದಾಳೆ.

    ಬಿಡಾರ ಮನೆಯಲ್ಲಿ ವಾಸವಾಗಿರುವ ಅಫ್ರಿನಾ ಅ.30ರಂದು ಸಂಜೆ 3.30 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿಂದ ಏಕಾಎಕಿ ಕಾಣೆಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಕಾಣೆಯಾದ ಅಫ್ರಿನಾ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply