LATEST NEWS
ಜಾರ್ಖಂಡ್ – ಗೂಡ್ಸ್ ರೈಲುಗಳ ಮುಖಾಮುಖಿ ಡಿಕ್ಕಿ ಇಬ್ಬರು ಲೋಕೋಪೈಲೆಟ್ ಸಾವು

ರಾಂಚಿ ಎಪ್ರಿಲ್ 01: ಎರಡು ಗೂಡ್ಸ್ ರೈಲುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಲೋಕೋಪೈಲೆಟ್ ಸಾವನಪ್ಪಿದ ಘಟನೆ ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಎನ್ ಟಿಪಿಸಿ ಕಂಪೆನಿ ನಿರ್ವಹಿಸುವ ಗೂಡ್ಸ್ ರೈಲು ಇದಾಗಿದ್ದು, ರೈಲ್ವೆ ಹಳಿಗಳನ್ನು ಕೂಡ ಎನ್ ಟಿಪಿಸಿ ಕಂಪೆನಿ ನಿರ್ವಹಿಸುತ್ತದೆ. ಇದು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸಲು ಬಳಸಲಾಗುತ್ತದೆ.

ಎರಡೂ ಸರಕು ರೈಲುಗಳ ಚಾಲಕರು ಮುಖಾಮುಖಿ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದಾರೆ” ಎಂದು ಸಾಹೇಬ್‌ಗಂಜ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಕಿಶೋರ್ ಟಿರ್ಕಿ ಪಿಟಿಐಗೆ ತಿಳಿಸಿದ್ದಾರೆ. ರೈಲ್ವೆ ಹಳಿಗಳ ಪುನಃಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಎನ್‌ಟಿಪಿಸಿ ಅಧಿಕಾರಿಗಳಿಗೆ ಭಾರತೀಯ ರೈಲ್ವೆ ನೀಡುತ್ತಿದೆ.