Connect with us

MANGALORE

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 167 ಮಂದಿಗೆ ಕೊರೊನಾ

ಮಂಗಳೂರು ಜುಲೈ 9: ಮಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ನಾಗಾಲೋಟ ಮುಂದುವರೆದಿದ್ದು,ಇಂದು ಮತ್ತೆ 167 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಕಳೆದ ಒಂದು ವಾರದಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಸೊಂಕು ದಾಖಲಾಗಿದೆ. ಇದರೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 1709ಕ್ಕೆ ಏರಿಕೆಯಾಗಿದೆ.


ಇಂದು ಪತ್ತೆಯಾದ 167 ಪ್ರಕರಣಗಳಲ್ಲಿ ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದಿಂದ 64 ಜನರಿಗೆ ಸೊಂಕು ಹರಡಿದೆ. 38 ಜನರಲ್ಲಿ ಸಂಪರ್ಕ ಪತ್ತೆ ಹಚ್ಚಬೇಕಾಗಿದೆ. ಸೌದಿ, ಮಸ್ಕತ್, ದುಬೈನಿಂದ ಆಗಮಿಸಿದ್ದ 3 , ಸರ್ಜರಿ ಪೂರ್ವ ಪರೀಕ್ಷೆಗೆ ಒಳಗಾದ 13 ಮಂದಿ, SARI ಲಕ್ಷಣಗಳಿದ್ದ 6 ಮಂದಿಗೆ ಸೋಂಕು ಪತ್ತೆ ಯಾಗಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1709 , ಅದರಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 977 ಕ್ಕೇರಿಕೆಯಾಗಿದೆ. ಇಂದು ಕೊರೊನಾ ಮುಕ್ತರಾಗಿ 07 ಮಂದಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 30 ಮಂದಿ ಬಲಿಯಾಗಿದ್ದಾರೆ.

Facebook Comments

comments