LATEST NEWS
ಏಳು ವರ್ಷದ ಬಾಲಕ ಒಂದೇ ವರ್ಷದಲ್ಲಿ ಯೂಟ್ಯೂಬ್ ನಿಂದ ಸಂಪಾದಿಸಿದ್ದು 160 ಕೋಟಿ
ಏಳು ವರ್ಷದ ಬಾಲಕ ಒಂದೇ ವರ್ಷದಲ್ಲಿ ಯೂಟ್ಯೂಬ್ ನಿಂದ ಸಂಪಾದಿಸಿದ್ದು 160 ಕೋಟಿ
ಮಂಗಳೂರು ಡಿಸೆಂಬರ್ 4: ಕೇವಲ 7 ವರ್ಷದ ಬಾಲಕ ಯೂಟ್ಯೂಬ್ ನಿಂದ ಬರೋಬ್ಬರಿ 160ಕೋಟಿ ರೂಪಾಯಿ ಸಂಪಾದಿಸಿ ಫೋರ್ಬ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ 2018 ರ ಯೂಟ್ಯೂಬ್ ಸ್ಟಾರ್ ಆಗಿ ರಯಾನ್ ಹೊರ ಹೊಮ್ಮಿದ್ದಾನೆ.
ಈತನ ಹೆಸರು ರಯಾನ್ ಇನ್ನೂ ಏಳರ ಪೊರ ಶಾಲೆಗೆ ಹೋಗಿ ಆಟವಾಡುತ್ತಾ ಕಾಲ ಕಳೆಯ ಬೇಕಿದ್ದ ಈ ಹುಡುಗ ಈಗ ಕೋಟ್ಯಾಧೀಶ.
ಚಿಕ್ಕಮಕ್ಕಳಿಗೆ ಇರುವಂತೆಯೇ ರಯಾನ್ ಗೂ ಆಟದ ಸಾಮಾನುಗಳು ಬಹಳ ಇಷ್ಟ, ಆದರೆ ಈತ ಬರಿ ಆಟದ ಸಾಮಾನಗಳೊಂದಿಗೆ ಆಟವಾಡಿಲ್ಲ . ಗೊಂಬೆಗಳೊಂದಿಗೆ, ಟ್ರೈನು, ಕಾರುಗಳೊಂದಿಗೆ ಆಟವಾಡುತ್ತಾ, ಹೊಸ ಹೊಸ ಆಟಿಕೆಗಳನ್ನು ಹೇಗೆ ಬಳಸಬೇಕೆಂದು ವಿಡಿಯೋ ತಯಾರಿಸಿ ಅದನ್ನು ಯೂಟ್ಯೂಬ್ ಚಾನೆಲ್ ಗೆ ಅಪ್ಲೋಡ್ ಮಾಡಿದ್ದಾನೆ.
2015 ರಲ್ಲಿ ರಯಾನ್ ಟಾಯ್ಸ್ ರಿವ್ಯೂ ಹೆಸರಿನ ಯೂಟ್ಯೂಬ್ ಚಾನೆಲ್ನ್ನು ಕ್ರಿಯೇಟ್ ಮಾಡಿದ್ದು, ಈ ಚಾನೆಲ್ ತಾನು ತಯಾರಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಈಗಾಗಲೇ ಈ ಚಾನೆಲ್ 1,73,17,533 ಚಂದಾದಾರರನ್ನು ಹೊಂದಿದೆ.
ರಯಾನ್ ಹಾಕುವ ವೀಡಿಯೊಗಳಿಗೆ ಅನೇಕ ಕಂಪೆನಿಗಳು ಜಾಹೀರಾತನ್ನು ನೀಡುತ್ತಿದ್ದು, ಈ ಮೂಲಕವೇ ರಯಾನ್ 21 ಮಿಲಿಯನ್ ಡಾಲರ್ ಗಳಿಸಿದ್ದಾನೆ.
ರಯಾನ್ ಹಾಕುವ ವೀಡಿಯೊ ರಿವ್ಯೂಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಹೊಸ ಆಟಿಕೆಗಳ ಕುರಿತಾದ ಮಾಹಿತಿಗಳನ್ನು ಪಡೆಯುತ್ತಾರೆ. ಕೇವಲ ಮೂರು ವರ್ಷಗಳ ಹಿಂದೆ ಪ್ರಾರಂಭಿಸಿದ ಯೂಟ್ಯೂಬ್ ಚಾನೆಲ್ ಅತೀ ಕಡಿಮೆ ಅವಧಿಯಲ್ಲಿ ಸೆನ್ಸೇಶನಲ್ ಆಗಿದೆ.
ಇದೀಗ 7 ವಯಸ್ಸಿನ ಪುಟಾಣಿ ಗಳಿಸುತ್ತಿರುವ ಸಂಪಾದನೆಯನ್ನು ಕಂಡು ಇಡೀ ವಿಶ್ವವೇ ರಯಾನ್ನತ್ತ ತಿರುಗಿ ನೋಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಯಾನ್ ವೈರಲ್ ಆಗಿಬಿಟ್ಟಿದ್ದಾನೆ. ಈ ಕುರಿತು ಪ್ರತಿಯೊಬ್ಬರೂ ಟ್ವೀಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.