Connect with us

    BELTHANGADI

    ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ಸಂಭ್ರಮ

    ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ಸಂಭ್ರಮ

    ಧರ್ಮಸ್ಥಳ ಡಿಸೆಂಬರ್ 5: ದೇಶದ ಹೆಸರಾಂತ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದೆ. ದೇಶದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಲಕ್ಷ ದೀಪಗಳ ಬೆಳಕನ್ನು ಕಂಗಳಲ್ಲಿ ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಿದ್ದಾರೆ.

    ಕೇವಲ ಧಾರ್ಮಿಕ ವಿಧಿವಿಧಾನಗಳಲ್ಲದೆ, ಧ್ಯಾನಕ್ಕೆ ಹಾಗೂ ಜ್ಞಾನಕ್ಕೆ ಬೆಳಕಾಗುವಂತಹ ಹಲವಾರು ಕಾರ್ಯಕ್ರಮಗಳು ದೀಪೋತ್ಸವದ ಸಂದರ್ಭದಲ್ಲಿ ಭಕ್ತರ ಗಮನ ಸೆಳೆಯುವುದರ ಮೂಲಕ ವಿಶಿಷ್ಟ ರೀತಿಯ ಲಕ್ಷದೀಪೋತ್ಸವ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

    ಇದೀಗ ಈ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮ ಮನೆಮಾಡಿದ್ದು, ಇಡೀ ಧರ್ಮಸ್ಥಳವೇ ಲಕ್ಷಾಂತರ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಕ್ಷೇತ್ರದಲ್ಲಿ ವರ್ಷದಲ್ಲಿ ಪ್ರಮುಖವಾಗಿ ಮೂರು ಆಚರಣೆಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೀಪಾವಳಿಯ ಆಚರಣೆ, ವಿಷುಸಂಕ್ರಮಣದ ಆಚರಣೆ ಹಾಗೂ ಲಕ್ಷದೀಪೋತ್ಸವ ಇಲ್ಲಿನ ಪ್ರಮುಖ ಆಚರಣೆಯಂತಿದೆ. ಕ್ಷೇತ್ರದಲ್ಲಿ ತಲತಲಾಂತರದಿಂದ ಈ ಉತ್ಸವವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಜನರು ಆಚರಿಸಿಕೊಂಡು ಬರುತ್ತಿದ್ದು, ಲಕ್ಷಾಂತರ ದೀಪಗಳೊಂದಿಗೆ ಲಕ್ಷಾಂತರ ಜನರೂ ಇಲ್ಲಿ ಗಮನಸೆಳೆಯುತ್ತಾರೆ.

    ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಎಲ್ಲಡೆ ಸಾಂಸ್ಕೃತಿಕ ಕಲರವ. ವಸ್ತುಪ್ರದರ್ಶನ ಮಂಟಪದಲ್ಲಿ ಸಂಗೀತ ಗಾನ ನೃತ್ಯಗಳ ಮಿಳಿತ, ಸರಿಗಮ ಹಾಡಿಗೆ ತಕಧಿಮಿ ಕುಣಿತ. ಲಕ್ಷ ದೀಪಗಳ ಸೊಬಗಿಗೆ ನೃತ್ಯ ವೈಭವಗಳ ಕಲಶ. ಲಕ್ಷ ದೀಪೋತ್ಸವಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ಆಧ್ಯಾತ್ಮದ ಜತೆ ಸಾಂಸ್ಕೃತಿಕ ಸಿಂಚನ. ಲಕ್ಷ ದೀಪೋತ್ಸವ ಪ್ರಾರಂಭಗೊಂಡ ದಿನದಿಂದ ಸಾಂಸ್ಕೃತಿಕ ಲೋಕ ಮೇಳೈಸುತ್ತಲೇ ಇದೆ.

    ವಸ್ತು ಪ್ರದರ್ಶನದ ಮಳಿಗೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ್ಞಾನಾರ್ಜನೆಯನ್ನು ಬೆಳೆಸುವ ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಕೃಷಿ, ಆಧುನಿಕ ತಂತ್ರಜ್ಞಾನದ ಮಳಿಗೆಗಳು ಬಂದವರನ್ನು ಆಕರ್ಷಿಸುತ್ತದೆ.

    ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಮಂಜುನಾಥ ಸ್ವಾಮಿಯ ಉತ್ಸವಮೂರ್ತಿಯ ದೇವಸ್ಥಾನದಿಂದ ಹೊರಗೆ ಬಂದು ಭಕ್ತರ ಬಳಿಗೆ ಬರುವ ಮೂಲಕ ಭಕ್ತರದೊಂದಿಗೆ ತಾವು ಎಂದಿಗೂ ಇರುವುದಾಗಿ ತೋರ್ಪಡಿಸುವಂತಹ ಆಚರಣೆ ಈ ದೀಪೋತ್ಸವದ ಸಂದರ್ಭದಲ್ಲಿ ನಡೆಯುತ್ತದೆ.

    ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಇಡುವ ಮೂಲಕ ಅದನ್ನು ಕ್ಷೇತ್ರದ ಅಸುಪಾಸಿನ ಕೆಲವು ಸ್ಥಳಗಳಿಗೆ ಮೆರವಣಿಗೆಯ ಮೂಲಕ ಕೊಂಡೊಯ್ದು, ಅಲ್ಲಿನ ಕಟ್ಟೆಗಳಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ನಡೆಸುವುದು ಈ ಲಕ್ಷದೀಪದ ಇನ್ನೊಂದು ವಿಶೇಷತೆಯಾಗಿದೆ.

    ಅಲ್ಲದೆ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ ಉತ್ಸವ, ಕಂಚಿಮಾರು ಕಟ್ಟೆ ಉತ್ಸವ, ಗೌರಿಮಾರು ಕಟ್ಟೆ ಉತ್ಸವ,ಸಮವಸರಣ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ನಡೆಯುತ್ತದೆಯಲ್ಲದೆ , ದೇವಸ್ಥಾನದ ಒಳಗೆ ವಿಶೇಷ ನಾದಸ್ವಾರಗಳ ಮೂಲಕ ದೇವರ ಪ್ರದಕ್ಷಿಣೆಯೂ ನಡೆಯುತ್ತದೆ.

    ಕ್ಷೇತ್ರದಲ್ಲಿ ತಲತಲಾಂತರದಿಂದ ಈ ಉತ್ಸವವನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಜನರು ಆಚರಿಸಿಕೊಂಡು ಬರುತ್ತಿದ್ದು, ಲಕ್ಷಾಂತರ ದೀಪಗಳೊಂದಿಗೆ ಲಕ್ಷಾಂತರ ಜನರೂ ಇಲ್ಲಿ ಗಮನಸೆಳೆಯುತ್ತಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply