Connect with us

LATEST NEWS

ಮಹಾರಾಷ್ಟ್ರ – ಪಪ್ಪಾಯಿ ತುಂಬಿದ್ದ ಟ್ರಕ್ ಉರುಳಿ 16 ಮಂದಿ ಕಾರ್ಮಿಕರ ಸಾವು

ಜಲಗಾಂವ್: ಮಹಾರಾಷ್ಟ್ರದಲ್ಲಿ ಪಪ್ಪಾಯಿ ತುಂಬಿದ್ದ ಟ್ರಕ್ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ.


ಮಹಾರಾಷ್ಟ್ರದ ಜಲಗಾಂವ್ ಜಲ್ಲೆಯಲ್ಲಿ ಭಾನುವಾರ ತಡ ರಾತ್ರಿ ಅವಫಡ ಸಂಭವಿಸಿದ್ದು, ಮೃತಪಟ್ಟವರೆಲ್ಲರೂ ಅಭೋದಾ, ಕೆರ್ಹಾಲಾ ಮತ್ತು ರಾವರ್ ಪ್ರದೇಶಕ್ಕೆ ಸೇರಿದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಪಪ್ಪಾಯಿ ತುಂಬಿದ ಟ್ರಕ್, ಕಿಂಗಾವ್ ಗ್ರಾಮದ ದೇವಾಲಯವೊಂದರ ಬಳಿ ಉರುಳಿ ಬಿದ್ದಿದೆ.

ಘಟನೆಯಲ್ಲಿ ಐವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ.