LATEST NEWS
ಕಾರ್ಕಳದಲ್ಲಿ ಮಿತಿ ಮೀರಿದ ಕಾಳಿಂಗ ಸರ್ಪದ ಹಾವಳಿ

ಕಾರ್ಕಳದಲ್ಲಿ ಮಿತಿ ಮೀರಿದ ಕಾಳಿಂಗ ಸರ್ಪದ ಹಾವಳಿ
ಉಡುಪಿ ನವೆಂಬರ್ 9: ಅರಣ್ಯ ನಾಶದ ನೇರ ಪ್ರಭಾವ ಈಗ ನಗರವಾಸಿಗಳಿಗೆ ಕಾಣಿಸತೊಡಗಿದೆ. ಬರೀ ಚಿರತೆ ಕಾಟಕ್ಕೆ ಬೇಸತ್ತಿದ್ದ ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶದ ಜನರಿಗೆ ಈಗ ಮತ್ತೊಂದು ತಲೆ ನೋವು ಶುರವಾಗಿದೆ. ಈ ಬಾರಿ ಕಾಳಿಂಗ ಸರ್ಪ ಪದೆ ಪದೆ ಜನ ನಿಬಿಡ ಪ್ರದೇಶದಲ್ಲಿ ಕಾಣಿಸಿಕೊಳ್ಳತೊಡಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪದೇ ಪದೇ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿದೆ. ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕಾಳಿಂಗ ಸರ್ಪ ಕಾಣಿಸಿಕೊಂಡು ಜನ ಬೆಚ್ಚಿಬಿದ್ದಿದ್ದಾರೆ.

ಇದೀಗ ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್ ಬಳಿಯ ಸುನಿಲ್ ಕೆ.ಆರ್. ಎಂಬವರ ಮನೆ ಅಂಗಳದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ತಕ್ಷಣವೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಮಾಹಿತಿ ನೀಡಿ, ಅವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.
ಸುಮಾರು 15 ಅಡಿ ಉದ್ದ ಹಾಗೂ 28 ಕೆಜಿಯಷ್ಟು ತೂಗುತ್ತಿದ್ದ ಬೃಹತ್ ಹಾವು ಸೆರೆಯಾಗಿದೆ. ಈ ಭಯಂಕರ ಸರ್ಪವನ್ನು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಬೈಲೂರು, ತೆಳ್ಳಾರು, ಗಣಿತ ನಗರ ಪರಿಸರದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮಾತ್ರ ಈ ಮಾದರಿಯ ಕಾಳಿಂಗ ಕಾಣಸಿಗುತ್ತೆ. ಆಹಾರ ಹುಡುಕುತ್ತಾ ಬಂದು, ಕೋಳಿಯಾಸೆಗೆ ನಗರ ಪ್ರದೇಶದ ಮನೆಗಳತ್ತ ಮುಖಮಾಡುತ್ತಿವೆ.