Connect with us

UDUPI

ಉಡುಪಿಯಲ್ಲಿ ಇಂದು 14 ಜನರಿಗೆ ಕೊರೊನಾ ಸೊಂಕು

ಉಡುಪಿ ಜುಲೈ 2: ಉಡುಪಿ ಜಿಲ್ಲೆಯಲ್ಲಿ ಇಂದು 14 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕರೊರೊನಾ ಪೀಡಿತರ ಸಂಖ್ಯೆ 1242 ಕ್ಕೆ ಏರಿಕೆಯಾಗಿದೆ.


ಜಿಲ್ಲೆಯ ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ಬಂದ 4, ಕೇರಳ ರಾಜ್ಯದ 1 ಕೇಸ್ ಇದೆ. ಉಡುಪಿಗೆ ಬೆಂಗಳೂರಿಂದ ಬಂದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 5 ಜನರಿಗೆ ಸೋಂಕು ಹರಡಿದೆ.
ಉಡುಪಿಯಲ್ಲಿ ಇಂದು 21 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರಗೆ 1190 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬರುತ್ತಿದ್ದು , ಆತಂಕ ಸೃಷ್ಠಿಸಿದೆ.

Facebook Comments

comments