ದೂರದ ಸಂಬಂಧಿಯಿಂದ 13 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ

ಸುಳ್ಯ ಸೆಪ್ಟೆಂಬರ್ 7: ದೂರದ ಸಂಬಂಧಿಯೊಬ್ಬ 13 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಾಲಕಿಯ ದೂರದ ಸಂಬಂಧಿ ಗೋಪಾಲಕೃಷ್ಣ ಎಂದು ಹೇಳಲಾಗಿದೆ.

13 ವರ್ಷದ ಹುಡುಗಿ ಕಳೆದ 2 ತಿಂಗಳಿನಿಂದ ಮನೆಯವರೊಂದಿಗೆ ಸರಿಯಾಗಿ ಮಾತುಕತೆ ನಡೆಸದೆ ಇರುವುದರಿಂದ ಸಂಶಯಗೊಂಡ ಪಾಲಕರು ಹುಡುಗಿಯನ್ನು ಸ್ಥಳೀಯ ವೈದ್ಯರಲ್ಲಿ ಪರೀಕ್ಷೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸಂತ್ರಸ್ಥೆ ಅತ್ಯಾಚಾರ ನಡೆದ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿ ಗೋಪಾಲಕೃಷ್ಣ ಚಿಕ್ಕಂದಿನಿಂದಲೂ ಹುಡುಗಿಯ ಮನೆಯಲ್ಲೇ ವಾಸವಿದ್ದು, ಎರಡು ತಿಂಗಳ ಹಿಂದೆ ಮನೆಯವರು ಮಲಗಿರುವ ಸಂದರ್ಭ ಸಂತ್ರಸ್ಥೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭ ಹುಡುಗಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಳ್ಯ ಸಂಪಾಜೆ ಗ್ರಾಮದ ಮಹಿಳೆ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Facebook Comments

comments