LATEST NEWS
ಉಡುಪಿ ಜಿಲ್ಲೆಯಲ್ಲಿ ಇಂದು 10 ಮಂದಿಗೆ ಕೊರೊನಾ

ಉಡುಪಿ ಜಿಲ್ಲೆಯಲ್ಲಿ ಇಂದು 10 ಮಂದಿಗೆ ಕೊರೊನಾ
ಉಡುಪಿ ಮೇ.31: ಉಡುಪಿಯಲ್ಲಿ ಈಗ ಕೊರೊನಾ ಸೊಂಕಿತರ ಸಂಖ್ಯೆ ಇನ್ನೂರರ ಗಡಿಗೆ ಬಂತು ನಿಂತಿದೆ.ಇಂದು ಮತ್ತೆ 10 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಾರಾಷ್ಟ್ರದಿಂದ ಆಗಮಿಸಿದ ಪ್ರಯಾಣಿಕರಿಂದ ಕೊರೊನಾ ಸೊಂಕು ಕಾಣಿಸಿಕೊಳ್ಳುತ್ತಿದ್ದು, ಇಂದು ಕೂಡ ದೃಢಪಟ್ಟ 10 ಪ್ರಕರಣಗಳಲ್ಲಿ 9 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದು ಒಬ್ಬರು ಗಲ್ಪ್ ರಾಷ್ಟ್ರಗಳಿಂದ ಬಂದವರಾಗಿದ್ದಾರೆ.
ಇಂದಿನ ಹೊಸ 10 ಪ್ರಕರಣಗಳ ಕಾರಣದಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆ ಕಂಡಿದೆ.
