LATEST NEWS
ಪಾರ್ಸೆಲ್ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ ಬಸ್ ಚಾಲಕರಿಗೆ ಪೊಲೀಸ್ ಆಯುಕ್ತರ ಕಿವಿ ಮಾತು

ಪಾರ್ಸೆಲ್ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಿ ಬಸ್ ಚಾಲಕರಿಗೆ ಪೊಲೀಸ್ ಆಯುಕ್ತರ ಕಿವಿ ಮಾತು
ಮಂಗಳೂರು ನವೆಂಬರ್ 6: ಮಂಗಳೂರು ಪೊಲೀಸರ ಮಾದಕ ವಸ್ತುಗಳ ವಿರುದ್ದ ವಾರ್ ಮುಂದುವರೆದಿದ್ದು, ಮತ್ತೆ 10 ಕೆ.ಜಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅಬೂಬಕರ್ ಸಮದ್, ಮಹಮ್ಮದ್ ಅಶ್ರಫ್, ಮಹಮ್ಮದ್ ಅಫ್ರಿದ್, ಮಹಮ್ಮದ್ ಅರ್ಷದ್ ಎಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಗಳ ಅಪರಾಧ ಹಿನ್ನಲೆಯ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಮಾದಕ ವಸ್ತುಗಳ ಪ್ರಕರಣದಲ್ಲಿ ಎಂತಹ ಪ್ರತಿಷ್ಠಿತ ವ್ಯಕ್ತಿಯೇ ಇದ್ದರು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಹರ್ಷ ಎಚ್ಚರಿಕೆ ನೀಡಿದ್ದಾರೆ.

ಬಸ್ ಚಾಲಕರು ಪಾರ್ಸೆಲ್ ಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕೆಂದು ಹೇಳಿದ ಪೊಲೀಸ್ ಕಮಿಷನರ್ ಬಸ್ ಗಳ ಮೂಲಕವೂ ಗಾಂಜಾ ಸಾಗಾಟ ನಡೆಯುತ್ತಿದ್ದು, ಬಸ್ ಚಾಲಕರು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.