LATEST NEWS
ಕಥುವಾ, ಉಜಿರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳೂರು ಬಂದರ್, ಸೆಂಟ್ರಲ್ ಮಾರ್ಕೆಟ್ ಬಂದ್
ಕಥುವಾ, ಉಜಿರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳೂರು ಬಂದರ್, ಸೆಂಟ್ರಲ್ ಮಾರ್ಕೆಟ್ ಬಂದ್
ಮಂಗಳೂರು, ಎಪ್ರಿಲ್ 23 : ಜಮ್ಮು- ಕಾಶ್ಮೀರದ ಕಥುವಾ, ಬೆಳ್ತಂಗಡಿ ಉಜಿರೆಯ ಸೌಜನ್ಯ, ಹೀಗೇ ವಿವಿಧ ಸ್ಥಳಗಳಲ್ಲಿ ಬಾಲಕಿಯರ ಮೇಲೆ ನಡೆದ ಪೈಶಾಚಿಕ ಕೃತ್ಯದಲ್ಲಿ ಭಾಗಿಯಾದವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಆಗ್ರಹಿಸಿ ಮಂಗಳೂರಿನಲ್ಲಿಂದು ಮಾರುಕಟ್ಟೆ ವ್ಯಾಪರಸ್ತರು ಬಂದ್ ಆಚರಿಸುತ್ತಿದ್ದಾರೆ.
ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ, ಮೀನು ಮಾರುಕಟ್ಟೆ, ಬಂದರ್ ಪ್ರದೇಶಗಳಲ್ಲಿನ ರಖಂ, ಹಾಗೂ ಚಿಲ್ಲರೆ ಮಾರಾಟಗಾರರು, ಗುಜರಿ ಅಂಗಡಿ ಮಾಲಕರು ಬಂದ್ ನಲ್ಲಿ ಪಾಲ್ಗೊಂಡಿದ್ದು, ತಮ್ಮ ಅಂಗಡಿ ಮುಂಗಟ್ಟುಗಳನ್ನು ಪ್ರತಿಭಟನಾರ್ಥವಾಗಿ ತೆರೆಯಲಿಲ್ಲ.
ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬಂದರು ಪ್ರದೇಶದ ಬಹುತೇಕ ಭಾಗಗಳು ಇಂದು ಬಂದ್ ನಲ್ಲಿ ಪಾಲ್ಗೊಂಡಿವೆ.
ಅಲ್ಲಲ್ಲಿ ಕಾಶ್ಮೀರದ ಘಟನೆ, ಜಿಲ್ಲೆಯಲ್ಲಿ ನಡೆದ ಪೈಶಾಚಿಕ ಕೃತ್ಯಗಳನ್ನು ಖಂಡಿಸುವ ಬ್ಯಾನರ್ ಗಳನ್ನು ಹಾಕಲಾಗಿದೆ.
ಅಂಗಡಿ ಸಮ್ಮುಖದಲ್ಲಿ ಕರ ಪತ್ರಗಳನ್ನು ಅಂಟಿಸಲಾಗಿದೆ.
ಇಡೀಯ ಬಂದರು ಪ್ರದೇಶ ಜನ ಸಂಚಾರ ಅತೀ ವಿರಳವಾಗಿದೆ. ಪ್ರಮುಖ ಮಾರುಕಟ್ಟೆ ಪ್ರದೇಶವಾದ ಸೆಂಟ್ರಲ್ ನಲ್ಲೂ ಇದೇ ಪರಿಸ್ಥಿತಿ , ಬಹುತೇಕ ವರ್ತಕರು ತಮ್ಮ ಅಂಗಡಿಗಳನ್ನು ಇಂದು ಮುಂಜಾನೆಯಿಂದಲೇ ತೆರೆಯಲಿಲ್ಲ.
ಸಂಪೂರ್ಣ ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ,
ಮುಂಜಾಗೃತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.
VIDEO