LATEST NEWS
ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿರಲು ನಾಲಾಯಕ್ – ಶೋಭಾ ಕರಂದ್ಲಾಜೆ

ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿರಲು ನಾಲಾಯಕ್ – ಶೋಭಾ ಕರಂದ್ಲಾಜೆ
ಉಡುಪಿ ನವೆಂಬರ್ 25: ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿಲ್ಲ ಅಲ್ಲಿ ಕಾಂಗ್ರೇಸ್ ಪಕ್ಷದ ರಾಜಕೀಯ ರಾಲಿ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬುದ್ದಿಜೀವಿಗಳೆಂದು ಕರೆಸಿಕೊಳ್ಳುವರು ಸಿಎಂ ಸಿದ್ದರಾಮಯ್ಯ ಅವರ ಬಾಲಂಗೋಚಿಗಳು ಎಂದು ವ್ಯಂಗ್ಯವಾಡಿದರು. ಕರ್ನಾಟಕದಲ್ಲಿ ಇರಲು ಶೋಭ ಕರಂದ್ಲಾಜೆ ಯೋಗ್ಯವಲ್ಲ ಎಂದು ಸಿದ್ದರಾಮಯ್ಯನವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಂಸದೆ, ಸಿದ್ದರಾಮಯ್ಯ ನವರೇ ಮೈಸೂರಲ್ಲಿರಲು ನಾಲಾಯಕ್ ನಾನು ಅಲ್ಲ, ಮೈಸೂರಿನ ಜನ ಇದನ್ನು ಹೇಳುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮನ ಬಗ್ಗೆ ಭಾಷಣ ಮಾಡಲು ಭಗವಾನ್ ಯಾರು? ಎಂದು ಪ್ರಶ್ನೆ ಮಾಡಿದ ಶೋಭಾ ಕರಂದ್ಲಾಜೆ, ಸಾಹಿತ್ಯ ಸಮ್ಮೇಳನದಲ್ಲಿ ರಾಮನ ಬಗ್ಗೆ ಯಾಕೆ ಬೈದರು, ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ನೆಲ ಜಲದ ಬಗ್ಗೆ ಅಲ್ಲಿ ಚರ್ಚೆಯಾಗುತ್ತಿಲ್ಲ, ಸಮ್ಮೇಳನ ಹೆಸರಲ್ಲಿ ಚುನಾವಣಾ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕೃಪಾಪೋಷಿತದಲ್ಲಿ ಇವೆಲ್ಲಾ ನಡೆಯುತ್ತಿದೆ ಎಂದು ಆರೋಪಿಸಿದರು. ಸಿಎಂ ಯಕ್ಷಗಾನ ಮಂಡಳಿಯ ಕೆಲಸ ಇದು ಎಂದು ಹೇಳಿದರು.