LATEST NEWS
ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಶಾಪ ಕಾಂಗ್ರೇಸ್ ನ್ನು ಸುಡಲಿದೆ – ಡಿ.ವಿ ಸದಾನಂದ ಗೌಡ

ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಶಾಪ ಕಾಂಗ್ರೇಸ್ ನ್ನು ಸುಡಲಿದೆ – ಡಿ.ವಿ ಸದಾನಂದ ಗೌಡ
ಬೆಂಗಳೂರು ಜನವರಿ 7: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿಕೊಲೆಗಳಿಗೆ ಕಾಂಗ್ರೇಸ್ ಸರಕಾರದ ದುರಾಡಳಿತವೇ ಕಾರಣ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಡಿ.ವಿ ಸದಾನಂದ ಗೌಡ ಬಶೀರ್ ಹತ್ಯೆ ಸೇರಿದಂತೆ ದೀಪಕ್ ರಾವ್ ಕೊಲೆ ಗಳು ಕಾಂಗ್ರೇಸ್ ಸರಕಾರ ಗೃಹ ಇಲಾಖೆಯನ್ನು ಸ್ವಹಿತಕ್ಕಾಗಿ ಬಳಿಸಿಕೊಂಡ ಫಲ ಎಂದು ಆರೋಪಿಸಿದರು.

ಡಿ.ವಿ ಸದಾನಂದ ಗೌಡರ ಟ್ವೀಟ್
” ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ಗೃಹ ಇಲಾಖೆಯನ್ನು ಸ್ವಹಿತಕ್ಕಾಗಿ ಬಳಸಿಕೊಂಡ ಫಲ . ನಿನ್ನೆ ಹಿಂದೂ ಯುವಕ ದೀಪಕ್ ರಾವ್ ಇಂದು ಮುಸ್ಲಿಂ ಯುವಕ ಬಷೀರ್ . ಸದಸ್ಯರನ್ನು ಕಳೆದುಕೊಂಡ ಕುಟುಂಬಗಳು ನೀಡುವ ಶಾಪ ನಿಮ್ಮನ್ನು ಸುಡದೇ ಬಿಡಲಾರವು
ಇನ್ನಾದರೂ ದಕ್ಷಿಣ ಕನ್ನಡದ ನಿಮ್ಮ ಕಾಂಗ್ರೆಸ್ ಮುಖಂಡರುಗಳು ಪ್ರಚೋದನೆ ಮಾಡದೆ ಬಾಯಿ ಮುಚ್ಚಿರಲು ಹೇಳಿ ರಾಜಕೀಯ ಬಿಟ್ಟು ಶಾಂತಿ ಕಾಪಾಡುವತ್ತ ಗಮನ ಹರಿಸಿ , ಪರಸ್ಪರ ಜನರಲ್ಲಿ ವಿಶ್ವಾಸ ಮೂಡಿಸಿ ”