LATEST NEWS
ಲವ್ ಜಿಹಾದ್ ವಿರುದ್ದ ಅಭಿಯಾನ – ಕೇಸ್ ವಾಪಾಸ್ ಪಡೆಯದಿದ್ದರೆ ಪ್ರತಿಭಟನೆ – ವಿಎಚ್ ಪಿ
ಲವ್ ಜಿಹಾದ್ ವಿರುದ್ದ ಅಭಿಯಾನ – ಕೇಸ್ ವಾಪಾಸ್ ಪಡೆಯದಿದ್ದರೆ ಪ್ರತಿಭಟನೆ – ವಿಎಚ್ ಪಿ
ಉಡುಪಿ ಜನವರಿ 24: ಜನವರಿ 22 ರಂದು ಹಿಂದೂ ಸಂಘಟನೆಗಳು ಲವ್ ಜಿಹಾದ್ ವಿರುದ್ದ ನಡೆಸಿದ ಅಭಿಯಾನ ವಿಚಾರದಲ್ಲಿ ಹಿಂದೂ ಮುಖಂಡರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇಂದು ಉಡುಪಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಎಚ್ ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಲವ್ ಜಿಹಾದ್ ವಿರುದ್ದ ನಡೆಸಿದ ಅಭಿಯಾನದ ಸಂಬಂಧ ಹಿಂದೂ ಮುಖಂಡರ ಮೇಲೆ ಐಪಿಎಸ್ ಸೆಕ್ಷನ್ 143, 149, 290 ನಿಯಮದಡಿ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.
ಹಿಂದೂ ಸಂಘಟನೆಯ ಮುಖಂಡರ ಮೇಲೆ ಕೇಸು ದಾಖಲಿಸುವ ಮೂಲಕ ರಾಜ್ಯ ಸರಕಾರ ಹಿಂದೂ ಧಮನ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಪೊಲಿಟಿಕಲ್ ಪೊಲೀಸ್ ಗಿರಿಯಾಗಿದ್ದು , ಹಿಂದೂ ಸಂಘಟನೆಯ ಮುಖಂಡರ ಮೇಲಿನ ಕೇಸನ್ನು ಒಂದು ವಾರದೊಳಗೆ ವಾಪಾಸ್ ಪಡೆಯದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜ್ ಬಸ್ ನಿಲ್ದಾಣದ ಬಳಿ ಜನವರಿ 22 ರಂದು ಅನುಮತಿ ಇಲ್ಲದೆ ಲವ್ ಜಿಹಾದ್ ವಿರುದ್ದ ಅಭಿಯಾನ ನಡೆಸಿದ ವಿಎಚ್ ಪಿ, ಬಜರಂಗದಳ ಹಾಗೂ ದುರ್ಗಾ ವಾಹಿನಿಯ ಪ್ರಮುಖರ ವಿರುದ್ದ ಉಡುಪಿ ಪೊಲೀಸರು ಕೇಸು ದಾಖಲಿಸಿದ್ದರು.