Connect with us

    BANTWAL

    ಯುವತಿಯೊಂದಿಗೆ ಸರಸ ಸಲ್ಲಾಪ, ವೈರಲ್ ಆಗಿದೆ ಕಾಂಗ್ರೇಸ್ ಕಾರ್ಯಕರ್ತನ ನಿಜರೂಪ

    ಯುವತಿಯೊಂದಿಗೆ ಸರಸ ಸಲ್ಲಾಪ, ವೈರಲ್ ಆಗಿದೆ ಕಾಂಗ್ರೇಸ್ ಕಾರ್ಯಕರ್ತನ ನಿಜರೂಪ

    ಬಂಟ್ವಾಳ,ಜನವರಿ 24: ಜಗತ್ತಿಗೆಲ್ಲಾ ನೈತಿಕತೆಯ ಬುದ್ಧಿ ಹೇಳುವ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನೋರ್ವ ತನ್ನ ಗೆಳತಿಯೊಂದಿಗೆ ಸರಸ ಸಲ್ಲಾಪ ನಡೆಸುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ತುಪ್ಪದಂತೆ ಹರಿದಾಡುತ್ತಿದೆ.

    ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಕೊಯಿಲಾ ಎಂಬಲ್ಲಿನ ಈ ಕಾರ್ಯಕರ್ತ ತನ್ನೊಂದಿಗೆ ಸರಸ ಸಲ್ಲಾಪ ನಡೆಸುತ್ತಿದ್ದ ಯುವತಿಗೆ ಆ ವಿಡಿಯೋವನ್ನು ಫಾರ್ವರ್ಡ್ ಮಾಡುವ ಭರದಲ್ಲಿ ಬೇರೊಂದು ವಾಟ್ಸ್ ಪ್ ಗ್ರೂಪ್ ಗೆ ಫಾರ್ವರ್ಡ್ ಮಾಡಿ ಪೇಚಿಗೆ ಸಿಲುಕಿದ್ದಾನೆ.

    ನಾಟಕ ಕಲಾವಿದ ಹಾಗೂ ನಾಟಕ ರಚನೆಗಾರ ಆಗಿರುವ ಈತ ತನ್ನ ಸಹವರ್ತಿ ಅದೇ ಪರಿಸರದ ಕಾಂಗ್ರೇಸ್ ಮುಖಂಡನ ಕಾರಿನಲ್ಲಿ ಯುವತಿಯನ್ನು ಕರೆದೊಯ್ದು, ತೆಗೆಯಬಾರದ ವಿಡಿಯೋ ತೆಗೆದು ಅದನ್ನು ಆತನೇ ವಾಟ್ಸ್ ಪ್ ಗ್ರೂಪಿಗೆ ಫಾರ್ವರ್ಡ್ ಮಾಡಿದ್ದಾನೆ.

    ಇದರಿಂದಾಗಿ ಈ ವಿಡಿಯೋ ಇದೀಗ ಸಾಮಾಜಿಕ ತಾಲತಾಣಗಳ ತುಂಬಾ ಹರಿದಾಡುತ್ತಿದ್ದು, ತನ್ನ ತಪ್ಪಿಗೆ ತಾನೇ ಶಿಕ್ಷೆ ಅನುಭವಿಸುವಂತಹ ಸ್ಥಿತಿಗೆ ಯುವಕ ಇದೀಗ ತಲುಪಿದ್ದಾನೆ.

    ವಿಡಿಯೋ ಇದೀಗ ಎಲ್ಲರ ಕೈ ಸೇರುತ್ತಿದ್ದು, ಇದರಿಂದಾಗಿ ಯುವಕನ ಜೊತೆಗೆ ಆ ವಿಡಿಯೋದಲ್ಲಿದ್ದ ಯುವತಿಯ ಮಾನ ಕೂಡಾ ಹರಾಜಾಗುವಂತಹ ಸ್ಥಿತಿ ತಲುಪಿದೆ.

    ಖಾಸಗಿ ವಿಚಾರಗಳನ್ನು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಯುವಕನ ಮೇಲೆ ಇದೀಗ ಕ್ರಮ ಕೈಗೊಳ್ಳುವಂತೆ ಒತ್ತಾಯಗಳೂ ಕೇಳಿ ಬರುತ್ತಿದೆ.

    ಇನ್ನೊಂದೆಡೆ ಯುವತಿಯರನ್ನು ಪುಸಲಾಯಿಸಿ ಈ ಯುವಕ ಇಂಥಹ ವಿಡಿಯೋಗಳನ್ನು ಮಾಡಿ ಆ ಯುವತಿಯರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎನ್ನುವ ಆರೋಪವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

    ಈ ಹಿನ್ನಲೆಯಲ್ಲಿ ಈತ ವಾಟ್ಸ್ ಪ್ ಗ್ರೂಪಿಗೆ ಗೊತ್ತಿಲ್ಲದೆ ವಿಡಿಯೋ ಫಾರ್ವರ್ಡ್ ಮಾಡಿದನೋ, ಅಥವಾ ಇನ್ನೇನಾದರೂ ಷಡ್ಯಂತ್ರ ಇದರ ಹಿಂದಿದೆಯೋ ಎನ್ನುವ ಕುರಿತು ವಿಚಾರಣೆ ನಡೆಸಬೇಕು ಎನ್ನುವ ಆಗ್ರಹಗಳೂ ಹೆಚ್ಚಾಗುತ್ತಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply