Connect with us

    LATEST NEWS

    ಡಿಸೆಂಬರ್ 12 ರಂದು ರಮಾನಾಥ ರೈ ಸಾಮರಸ್ಯ ಯಾತ್ರೆ

    ಡಿಸೆಂಬರ್ 12 ರಂದು ರಮಾನಾಥ ರೈ ಸಾಮರಸ್ಯ ಯಾತ್ರೆ

    ಮಂಗಳೂರು, ನವೆಂಬರ್ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗಿದ್ದು ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ – ಸಾಮರಸ್ಯ ನೆಲೆಸುವುದಕ್ಕಾಗಿ ಸಾಮರಸ್ಯ ಡಿಸೆಂಬರ್‌ 12 ರಂದು ಪಾದಯಾತ್ರೆ ಆರಂಭವಾಗಲಿದೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

    ಡಿಸೆಂಬರ್ 12 ರಂದು ಬಂಟ್ವಾಳದ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ ಎಂದು ಸಚಿವರು ನುಡಿದರು. ಬೆಳ್ಳಿಗ್ಗೆ 9 ಗಂಟೆಗೆ ಪರಂಗಿಪೇಟೆಯಲ್ಲಿ ಪಾದಯಾತ್ರೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಮಾಣೆಯಲ್ಲಿ ಮುಕ್ತಾಯವಾಗಲಿದೆ ಎಂದರು.

    ಈ ಸಾಮರಸ್ಯ ಯಾತ್ರೆಯಲ್ಲಿ ಯಾವುದೇ ಘೋಷಣೆಗಳು ಇರುವುದಿಲ್ಲ ಎಂದು ತಿಳಿಸಿದರು. ಇಂದು ಕೇವಲ ಶಾಂತಿಯುತ ಪಾದಯಾತ್ರೆ ಎಂದರು. ಚುನಾವಣೆ ಅಥವಾ ಸಂಘಟನೆಯ ದೃಷ್ಟಿಯಿಂದ ಈ ಕಾರ್ಯಕ್ರಮವಲ್ಲ ಎಂದು ಹೇಳಿದ ಅವರು ಕೋಮು ವಿಷಬೀಜ ಬಿತ್ತುವವರ ವಿರುದ್ಧ ಕಾರ್ಯಕ್ರಮವಾಗಿದೆ ಎಂದರು.

    ಡಿಸೆಂಬರ್ 12 ರಂದು ಬಂಟ್ವಾಳದ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಆಯೋಜಿಸಲಾಗಿದೆ ಎಂದು ಸಚಿವರು ನುಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *